ಬಿಗ್ ಬಾಸ್ ಚಿತ್ರೀಕರಣದ ವೇಳೆ ಮರಾಠಿ ನಟ ಬಂಧನ!

Picture of Cinibuzz

Cinibuzz

Bureau Report

ಚೆಕ್ ಬೌನ್ಸ್ ಪ್ರಕರಣ ಸಂಬಂಧ ಮರಾಠಿ ಬಿಗ್ ಬಾಸ್ ಸ್ಪರ್ಧಿ ಅಭಿಜಿತ್ ಅವರನ್ನು ಕಾರ್ಯಕ್ರಮ ಚಿತ್ರೀಕರಣದ ವೇಳೆಯಲ್ಲಿಯೇ ಸತಾರ ಪೊಲೀಸರು ಬಂಧಿಸಿದ್ದಾರೆ. ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವಾಗುತ್ತಿದ್ದ ಮರಾಠಿ ಬಿಗ್ ಬಾಸ್ 2 ಸೆಟ್ ಗೆ ದಾಳಿ ನಡೆಸಿದ ಪೊಲೀಸರು ಅಭಿಜಿತ್ ನನ್ನು ವಶಕ್ಕೆ ಪಡೆದಿದ್ದಾರೆ.

ಸತಾರ ಕೋರ್ಟ್ ಜಾರಿ ಮಾಡಿದ ವಾರೆಂಟ್ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 2015ರ ಚೆಕ್ ಬೌನ್ಸ್ ಪ್ರಕರಣ ಸಂಬಂಧ ಕೋರ್ಟ್ ವಿಚಾರಣೆಯಲ್ಲಿ ಸಮನ್ಸ್ ಜಾರಿ ಮಾಡಿದರು ಅಭಿಜಿತ್ ಭಾಗಿಯಾಗದ ಹಿನ್ನೆಲೆ ಕೋರ್ಟ್ ವಾರೆಂಟ್ ಜಾರಿ ಮಾಡಿದೆ

ಇನ್ನಷ್ಟು ಓದಿರಿ

Scroll to Top