ಟ್ರೆಡಿಷನಲ್ ಧಿರಿಸಿನಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಪ್ರೋಮೋ ಶೂಟ್!

Picture of Cinibuzz

Cinibuzz

Bureau Report

ಸದ್ಯದಲ್ಲೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಜನ್ ಶುರುವಾಗಲಿದ್ದು, ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ ಪ್ರೋಮೋಗಾಗಿ ಟ್ರೆಡಿಷನಲ್ ಧಿರಿಸಿನಲ್ಲಿ ಫೋಸ್ ಕೊಟ್ಟಿದ್ದಾರೆ. ಕೆಂಪು ಬಣ್ಣದ ಸೀರೆ ಉಟ್ಟು ರಕ್ಷಿತಾ  ಮಿಂಚಿದರೆ, ಪಂಚೆ, ಕೋಟು, ತಲೆಗೆ ಪೇಟ ಹಾಕಿಕೊಂಡು ಅರ್ಜುನ್ ಜನ್ಯ ಹಾಗೂ ವಿಜಯ್ ರಾಘವೇಂದ್ರ ಸೆಲ್ಫಿಗೆ ಪೋಸ್ ನೀಡಿದ್ದಾರೆ.

ಮೂವರು ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮ ಮತ್ತೆ ಶುರುವಾಗಲಿದೆ.ಈ ಫೋಟೋವನ್ನು ನಟಿ ರಕ್ಷಿತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮ ಯಾವಾಗ ಶುರು, ಅದರ ಆಡಿಷನ್ ವಿವರಗಳು ಸದ್ಯದಲ್ಲಿಯೇ ತಿಳಿಯಲಿದೆ.

ಇನ್ನಷ್ಟು ಓದಿರಿ

Scroll to Top