ಅರ್ಜುನ್ ಕಪೂರ್ ಜನುಮದಿನಕ್ಕೆ ಸರ್ ಫ್ರೈಸ್ ಗಿಫ್ಟ್ ನೀಡಿದ ಮಲೈಕಾ!

Picture of Cinibuzz

Cinibuzz

Bureau Report

ಬಾಲಿವುಡ್ ನಲ್ಲಿ ಸದ್ಯ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಸುದ್ದಿಗಳಲ್ಲಿ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ ಅವರ ಲವ್ವಿ ಡವ್ವಿ ವಿಚಾರವೂ ಒಂದು. ಇವರಿಬ್ಬರು ರಿಲೇಶನ್ ಶಿಪ್ ನಲ್ಲಿ ಇರುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದು, ಯಾವಾಗಲೂ ಅಂಟಿಕೊಂಡೇ ಇರುವ ಈ ಜೋಡಿ ವಿದೇಶದಲ್ಲಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹೌದು ನಟ ಅರ್ಜುನ್ ಕಪೂರ್ 34 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, 46 ವರ್ಷದ ಮಲೈಕಾ ಅರೋರ ಡಿಫರೆಂಟ್ ಆಗಿ ಆಚರಿಸುವ ಮೂಲಕ ಬಾಯ್ ಫ್ರೆಂಡ್ ಗೆ ಸರ್ ಫ್ರೈಸ್ ಗಿಫ್ಟ್ ನೀಡಿದ್ದಾರೆ

ಅಷ್ಟೆಯಲ್ಲ ಸಾಮಾಜಿಕ ಜಾಲತಾಣದಲ್ಲಿ ಮಲೈಕಾ ತುಂಬಾನೆ ಪ್ರೀತಿಯಿಂದ ಅರ್ಜುನ್ ಗೆ ಶುಭಾಶಯ ತಿಳಿಸಿದ್ದಾರೆ.
ನನ್ನ ಕ್ರೇಜಿ ಅರ್ಜುನ್ ಗೆ ಹುಟ್ಟುಹಬ್ಬದ ಶುಭಾಷಯಗಳು. ಯಾವಾಗಲು ಸಂತೋಷದಿಂದ ಇರು” ಇಬ್ಬರ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ.

ಇನ್ನಷ್ಟು ಓದಿರಿ

Scroll to Top