ಏಕ್ ಲವ್ ಯಾ ತಂಡಕ್ಕೆ ಸುಪ್ರೀಂ ಹೀರೋ ಸೇರ್ಪಡೆ!

Picture of Cinibuzz

Cinibuzz

Bureau Report

ದಿ ವಿಲನ್ ಬಳಿಕ ನಿರ್ದೇಶಕ ಪ್ರೇಮ್ ನಿರ್ದೇಶಿಸುತ್ತಿರುವ ಏಕ್ ಲವ್ ಯಾ ಚಿತ್ರತಂಡಕ್ಕೆ ಸ್ಯಾಂಡಲ್ ವುಡ್ ಸುಪ್ರಿಂ ಹೀರೋ ಶಶಿಕುಮಾರ್ ಸೇರ್ಪಡೆಯಾಗಿದ್ದಾರೆ. ಹೌದು ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಈ ಚಿತ್ರದ ನಾಯಕನಾಗಿದ್ದು, ಪ್ರಮುಖ ಪಾತ್ರವೊಂದರಲ್ಲಿ ಶಶಿಕುಮಾರ್ ಆಯ್ಕೆಯಾಗಿದ್ದಾರೆ. ಆದರೆ ಪಾತ್ರದ ಕುರಿತು ಪ್ರೇಮ್ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಆದರೆ, ಶಶಿಕುಮಾರ್ ಮತ್ತು ಛಾಯಾಗ್ರಹಕ ಮಹೇಂದ್ರ ಸಿಂಹ ಅವರ ಆಗಮನ ಏಕ್ ಲವ್ ಯಾ ಚಿತ್ರಕ್ಕೆ ಖುಷಿ ನೀಡಿದೆ ಎಂದು ಪ್ರೇಮ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ರಾಣಾಗೆ ಈ ಚಿತ್ರದಲ್ಲಿ ರೀಷ್ಮಾ ನಾನಯ್ಯ ಎಂಬ ಕೊಡಗಿನ ಹುಡುಗಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು ಆಕ್ಷನ್ ದೃಶ್ಯಗಳನ್ನ ಪೋಷನ್ ಮುಗಿದಿದೆ. ಇನ್ನುಳಿದಂತೆ ರಕ್ಷಿತಾ ಪ್ರೇಮ್ ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top