ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಶೂಟಿಂಗ್ ಮುಗಿಸಿಕೊಂಡಿರುವ ಮೇಘನಾ ಗಾಂವ್ಕರ್ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ ಸಂತೋಷ್ ಜಿ ನಿರ್ದೇಶನದಲ್ಲಿ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ಮದುವೆ ಮನೆಯಲ್ಲಿ ಈ ಕಥೆ ಸಾಗಲಿದ್ದು, ಕಥೆ ಮತ್ತು ಪಾತ್ರವನ್ನು ಇಷ್ಟಪಟ್ಟು ಮೇಘನಾ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಅಂದಹಾಗೆ, ಈ ಸಿನಿಮಾಗೆ ಜೂಡ ಸ್ಯಾಂಡಿ ಮ್ಯೂಸಿಕ್ ಮಾಡುತ್ತಿದ್ದಾರೆ. ಚಿತ್ರದ ಹೆಸರು ಸದ್ಯದಲ್ಲಿಯೇ ಹೊರಬರಲಿದೆ.
ಮೇಘನಾ ಗಾಂವ್ಕರ್ ಹೊಸ ಸಿನಿಮಾ ಅನೌನ್ಸ್ ಆಯ್ತು!
Cinibuzz
Bureau Report
ಇನ್ನಷ್ಟು ಓದಿರಿ











































