ಚೇತನ್ ಚಂದ್ರ ಅಪ್ಪ ಆಗಲಿದ್ಧಾರೆ!

Picture of Cinibuzz

Cinibuzz

Bureau Report

ಪಿಯುಸಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ಚೇತನ್ ಚಂದ್ರ ನಂತರ ರಾಜಧಾನಿ, ಪ್ರೇಮಿಸಂ, ಜಾತ್ರೆ, ಸಂಯುಕ್ತ 2 ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ನಿರೀಕ್ಷಿಸಿದ ಮಟ್ಟಿಗೆ ಯಾವುದೇ ಸಿನಿಮಾ ಯಶಸ್ಸು ತಂದುಕೊಡದ ಕಾರಣ ಚೇತನ್ ಚಂದ್ರ ಚಿತ್ರರಂಗದಿಂದ ದೂರ ಉಳಿಯಲು ಆಲೋಚಿಸಿದ್ದರಂತೆ.

ಅದರ ಜತೆ ಜತೆಗೆ  ಎರಡು ವರ್ಷಗಳ ಹಿಂದೆ ಗೆಳತಿ ರಚನಾ ಹೆಗಡೆಯವರನ್ನು ವರಿಸಿ ದಾಂಪತ್ಯಕ್ಕೂ ಕಾಲಿಟ್ಟಿದ್ದ ಚೇತನ್ ಫ್ಯಾಮಿಲಿ ಮೆನ್ ಆಗಿಯೂ ಎಂಜಾಯ್ ಮೂಡ್ ನಲ್ಲಿದ್ದರು. ಚೇತನ್ ‘Soon to be parents’ ಆಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅಪ್ಪನಾಗುವ ಖುಷಿಯಲ್ಲಿದ್ಧಾರೆ.

ಇನ್ನಷ್ಟು ಓದಿರಿ

Scroll to Top