ರೊಮ್ಯಾಂಟಿಕ್ ಮೂಡ್ ನಲ್ಲಿದ್ಧಾರೆ ಬಚ್ಚನ್ ದಂಪತಿ!

Picture of Cinibuzz

Cinibuzz

Bureau Report

ಬಿ ಟೌನಿನಲ್ಲಿ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪೈಕಿ ಬಿಗ್ ಬಿ ಪ್ರಮುಖರು. ಆಗಾಗ ತಮ್ಮ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ ಈ ಬಾರಿ ತಮ್ಮ ಫೋಟೋವೊಂದನ್ನು ಶೇರ್ ಮಾಡದೇ ಸಹ ಆ ಫೋಟೋ ವೈರಲ್ ಆಗಿದೆ. ಹೌದು ಅಮಿತಾಬ್ ಮತ್ತು ಜಯಾ ಬಚ್ಚನ್ ಜತೆಯಿರುವ ಫೋಟೋ ಇದಾಗಿದ್ದು, ಇದರಲ್ಲಿ ಬಚ್ಚನ್ ಜೋಡಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ಧಾರೆ.

ಸಾಕಷ್ಟು ಅಭಿಮಾನಿಗಳು ಈ ಫೋಟೋವನ್ನು ಇಷ್ಟಪಟ್ಟಿದ್ದರೆ ಮತ್ತೂ ಕೆಲವರು ಇದೇ ಫೋಟೋವನ್ನು ಟ್ರೋಲ್ ಗೂ ಒಳಪಡಿಸಿದ್ದಾರೆ. ಅದರಲ್ಲೊಬ್ಬ  ಇಷ್ಟು ವರ್ಷಗಳಿಂದ ಜಯಾಬಚ್ಚನ್ ಜೊತೆ ಸಂಸಾರ ಮಾಡ್ತಿರುವ ಅಮಿತಾಬ್ ಬಚ್ಚನ್ ಗೆ ಪ್ರಶಸ್ತಿ ಸಿಗಲೇಬೇಕು ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ. ಜಯಾ ಬಚ್ಚನ್, ಫೋಟೋ ಹೊಡೆಯಲು ಒಪ್ಪಿಗೆ ನೀಡಿದ್ದೇ ಆಶ್ಚರ್ಯವೆಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಇಂಥ ಸಿಟ್ಟಿನ ಮಹಿಳೆಯನ್ನು ನಾನೆಲ್ಲೂ ನೋಡಿಲ್ಲವೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top