ಪಬ್ಲಿಕ್ ನಲ್ಲಿ ಪ್ರಿಯಾಂಕಗೆ ಕಿಸ್ ಕೊಟ್ಟ ನಿಕ್!

Picture of Cinibuzz

Cinibuzz

Bureau Report

ಬಿ ಟೌನಿನಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ಕಪಲ್ಸುಗಳು ಪೈಕಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪ್ರಮುಖರಾದವರು. ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋಗಳು ವೈರಲ್ ಆಗುತ್ತಲೇ ಇವೆ. ಕೆಲವು ಫೊಟೋಗಳಿಗೆ ಜಯಕಾರ ಮೊಳಗಿದರೆ ಮತ್ತೂ ಕೆಲವು ಫೋಟೋಗಳು ಟ್ರೋಲಿಗೂ ಒಳಗಾಗುತ್ತದೆ. ಸದ್ಯ ಪ್ರಿಯಾಂಕ ಮತ್ತು ನಿಕ್ ರೊಮ್ಯಾಂಟಿಕ್ ಫೋಟೋವೊಂದು ವೈರಲ್ ಆಗಿದೆ.

ಫೋಟೋದಲ್ಲಿ ಲವ್ ಬರ್ಡ್ಸ್,ಪ್ಯಾರೀಸ್ ನ ಸುಂದರ ತಾಣದಲ್ಲಿ ಮುತ್ತಿಡುತ್ತಿದ್ದಾರೆ. ಸೋಫಿ ಟರ್ನರ್ ಮತ್ತು ಜೋ ಜೊನಸ್ ಮದುವೆ ಸಮಾರಂಭದ ಪ್ಯಾರೀಸ್ ನಲ್ಲಿ ನಡೆಯುತ್ತಿದೆ. ಮದುವೆಗೂ ಮುನ್ನ ಪ್ಯಾರೀಸ್ ನಲ್ಲಿ ನಿಕ್, ಪ್ರಿಯಾಂಕಾ ಪ್ರೇಮ ಪಕ್ಷಿಗಳಾಗಿ ಎಂಜಾಯ್ ಮೂಡನಲ್ಲಿದ್ದಾರೆ. ಲಂಚ್ ನಿಂದ ಡಿನ್ನರ್ ವರೆಗೆ ರೋಮ್ಯಾನ್ಸ್ ಮಾಡುವ ಒಂದು ಅವಕಾಶವನ್ನೂ ಪಿಗ್ಗಿ-ನಿಕ್ ಬಿಡ್ತಿಲ್ಲ. ಮದುವೆ ಕಾರ್ಯಕ್ರಮದ ಪ್ರತಿ ಕ್ಷಣವನ್ನೂ ಯೂಟಿಲೈಜ್ ಮಾಡಿಕೊಳ್ಳುತ್ತಲೇ ಇದ್ದಾರೆ.

ಇನ್ನಷ್ಟು ಓದಿರಿ

Scroll to Top