ಹಾಟ್ ಲುಕ್ ನಲ್ಲಿ ಕರಿಷ್ಮಾ ಕಪೂರ್!

Picture of Cinibuzz

Cinibuzz

Bureau Report

ಹುಟ್ಟುಹಬ್ಬವಾಗಲಿ, ಯಾವುದೇ ಕಾರ್ಯಕ್ರಮವಾಗಲಿ ಸೆಲೆಬ್ರೆಟಿಗಳು ಎಗ್ಗಿಲ್ಲದೇ ಸಿಗ್ಗಿಲ್ಲದೇ ವಿಧ ವಿಧವಾದ ಫೊಟೋಗಳನ್ನುಅಭಿಮಾನಿಗಳಿಗಾಗಿ ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮಂಗಳವಾರವಷ್ಟೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಹಾಟ್ ಫೊಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಬಿಸಿ ಹೆಚ್ಚಿಸಿದ್ದಾರೆ.

ಸ್ವಿಮ್ಮಿಂಗ್ ಪೂಲ್ ಒಂದರ ಬಳಿ ಮೊನೊಕಿನಿ ತೊಟ್ಟು ಮಾದಕ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಲವ್ ಯುವರ್‌ಸೆಲ್ಫ್ ಎಟ್ ಎವೆರಿ ಏಜ್, #ನೋ ಫಿಲ್ಟರ್, #ಬರ್ತ್ ಡೇ ಮೂಡ್’ ಎಂಬ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ. ಅಂದಹಾಗೆ ಲಂಡನ್‌ನಲ್ಲಿ ಕುಟುಂಬ ಸಮೇತ ಬರ್ತ್ ಡೇ ಆಚರಿಸಿಕೊಂಡಿರುವ ಕರಿಷ್ಮಾ ಸದ್ಯ 45ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಓದಿರಿ

Scroll to Top