ಹಸೆಮಣೆ ಏರಿದ ಆರ್ತಿ ಛಾಬ್ರಿಯಾ!

Picture of Cinibuzz

Cinibuzz

Bureau Report

ಸಂತ ಚಿತ್ರದ ಐಟಂ ಸಾಂಗೊಂದರ ಮೂಲಕ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದ ಪಂಜಾಬಿ ಬೆಡಗಿ ನಟಿ ಆರ್ತಿ ಛಾಬ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈ ಮೂಲಕ ವಿಶಾರದ್ ಬೀಡಸ್ಸಿ ಜತೆ ಸಪ್ತಪದಿ ತುಳಿದಿದ್ದಾರೆ. ಮಾರ್ಚ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಜೂನ್ 24ರಂದು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇವರ ಮದುವೆಗೆ ಕುಟುಂಬದವರು ಮತ್ತು ಸ್ನೇಹಿತರಿಗೆ ಮಾತ್ರ ಹಾಜರಾಗಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

ಅನೇಕ ವರ್ಷಗಳಿಂದ ಆರ್ತಿ ಮತ್ತು ವಿಶಾರದ್ ಇಬ್ಬರು ಒಬ್ಬರ ನೊಬ್ಬರು ಪ್ರೀತಿಸುತ್ತಿದ್ದರು. ಆದ್ರೆ ಇವರ ಪ್ರೀತಿ ವಿಚಾರ ರಿವೀಲ್ ಆಗದಂತೆ ಸೀಕ್ರೆಟ್ ಕಾಯ್ದುಕೊಂಡಿದ್ದರು. ಸದ್ಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮದುವೆ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಆರ್ತಿ ಅವರು ರವಿಚಂದ್ರನ್ ಅಭಿನಯದ ‘ಅಹಂ ಪ್ರೇಮಾಸ್ಮಿ’ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ನಂತರ ಶಿವರಾಜ್ ಕುಮಾರ್ ಅಭಿನಯದ ‘ಸಂತ’ ಮತ್ತು ‘ರಜನಿ’ ಚಿತ್ರದಲ್ಲೂ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಹಿಂದಿ, ತೆಲುಗು ಚಿತ್ರರಂಗದಲ್ಲೂ ಕಮಾಲು ಮಾಡಿದ್ದ ಆರ್ತಿ, ಹಿಂದಿಯ ಲಜ್ಜ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು.

ಇನ್ನಷ್ಟು ಓದಿರಿ

Scroll to Top