ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಮಧ್ಯೆ ಬಿರುಕು!

Picture of Cinibuzz

Cinibuzz

Bureau Report

ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಜೋಡಿಯ ಮಧ್ಯೆ ಬಿರುಕುಂಟಾಗಿದ್ದು, ಸೆಪರೇಟ್ ಆಗಲೂ ಬಯಸಿದ್ದಾರಂತೆ. ಈಗಾಗಲೇ ಬಹಳಷ್ಟು ಮಾಧ್ಯಮಗಳ ಈ ವಿಚಾರವನ್ನು ಬಹಿರಂಗಪಡಿದ್ದು ಅಧಿಕೃತವಾಗಿ ಈ ಜೋಡಿ ಮಾಹಿತಿ ನೀಡಬೇಕಿದೆ. ಕಳೆದ ಕೆಲ ವಾರಗಳಿಂದ ದಿಶಾ ಪಟಾನಿ ಮತ್ತು ಟೈಗರ್ ತುಂಬಾ ಕಠಿಣವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇದೀಗ ಅವರು ಪ್ರತ್ಯೇಕವಾಗಿರಲು ಡಿಸೈಡ್ ಮಾಡಿದ್ದಾರೆ ಎನ್ನಲಾಗಿದೆ.

ಕಳೆದ ವಾರ ಮುಂಬೈನ ರೆಸ್ಟುರೆಂಟ್‌ನಿಂದ ಹೊರಬಂದ ದಿಶಾ ಮತ್ತು ಟೈಗರ್‌ಗೆ ಅಭಿಮಾನಿಗಳು ದಿಶಾ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಯಸಿ ಅವರ ಮೇಲೆ ಮುತ್ತಿಗೆ ಹಾಕಿದ್ದರು. ಆದರೆ, ಟೈಗರ್ ದಿಶಾರನ್ನು ಅಭಿಮಾನಿಗಳಿಂದ ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಳೆದ 2016 ರಿಂದ ಡೇಟಿಂಗ್‌ನಲ್ಲಿರುವ ಟೈಗರ್ ಮತ್ತು ದಿಶಾ ಭಾರತ್ ಚಿತ್ರದ ಪ್ರೀಮಿಯರ್‌ನಲ್ಲಿ ಅಧಿಕೃತವಾಗಿ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಎರಡು ವರ್ಷಗಳ ಬಾಂಧವ್ಯಕ್ಕೆ ಇತಿಶ್ರೀ ಹಾಡಿರುವುದು ಅಭಿಮಾನಿಗಳಲ್ಲಿ ತುಂಬಾ ನೋವು ತಂದಿದೆ.

ಇನ್ನಷ್ಟು ಓದಿರಿ

Scroll to Top