ಸ್ಟಾರ್ ಮಗಳ ಜತೆ ಕ್ರಿಕೆಟರ್ ರಾಹುಲ್ ಡೇಟಿಂಗ್!

Picture of Cinibuzz

Cinibuzz

Bureau Report

ಕನ್ನಡಿಗ ಕ್ರಿಕೆಟರ್ ಕೆ.ಎಲ್. ರಾಹುಲ್ ಮತ್ತು ನಟಿ ಆತಿಯಾ ಶೆಟ್ಟಿ ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ. ಕಳೆದ ಫೆಬ್ರವರಿಯಿಂದ ಇಬ್ಬರೂ ಡೇಟ್ ಮಾಡುತ್ತಿದ್ದು, ಈ ವಿಚಾರವನ್ನು ಸೀಕ್ರೆಟಾಗಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆತಿಯಾ ಶೆಟ್ಟಿ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಮನ ಶೆಟ್ಟಿ ಅವರ ಪುತ್ರಿ. ಈ ವಿಚಾರದ ಕುರಿತು ಮಾತನಾಡಲು ಈ ಜೋಡಿ ರಿಜೆಕ್ಟ್ ಮಾಡಿರುವುದು ಸಹ ಅನುಮಾನಗಳಿಗೆ ಕಾರಣವಾಗಿದೆ.

https://www.instagram.com/p/Bwrl4SnBwcV/?utm_source=ig_web_copy_link

ಸದ್ಯ ಕೆ ಎಲ್‌ ರಾಹುಲ್‌ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಆಡಲು ಟೀಂ ಇಂಡಿಯಾ ಜತೆಯಲ್ಲಿದ್ದಾರೆ. ಇನ್ನು ಸುನೀಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ 2015ರಲ್ಲಿ ಹೀರೋ ಸಿನಿಮಾ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದರು. ಆಮೇಲೆ ಮುಬಾರಕನ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮೋತಿಚೂರ್‌ ಚಕ್ನಾಚೂರ್‌ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಾಹುಲ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಆಕಾಂಕ್ಷ ರಂಜನ್ ಕಪೂರ್ ಎಂಬುವರು ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಫೋಟೋ ವೈರಲ್ ಆಗುತ್ತಿದೆ.

ಇನ್ನಷ್ಟು ಓದಿರಿ

Scroll to Top