25 ದಿನದತ್ತ ಮುನ್ನುಗುತ್ತಿದೆ ಐ ಲವ್ ಯು!

Picture of Cinibuzz

Cinibuzz

Bureau Report

ಲವ್ ಗುರುಗಳ ಬಹು ನಿರೀಕ್ಷಿತ ಸಿನಿಮಾ ಐ ಲವ್ ಯು ರಿಲೀಸ್ ಆಗಿ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲೂ ಕಮಾಲು ಮಾಡುತ್ತಿದೆ. ಬಿಡುಗಡೆಯಾದ 325 ಚಿತ್ರಮಂದಿರಗಳಲ್ಲೂ 25ನೇ ದಿನದತ್ತ ಮುನ್ನುಗ್ಗುತ್ತಿದೆ. ಕನ್ನಡ ಸಿನಿಮಾವೊಂದು ರಿಲೀಸ್‌ ಆದ ಅಷ್ಟೂ ಚಿತ್ರಮಂದಿರಗಳಲ್ಲಿ ಇದೇ ಮೊದಲ ಬಾರಿಗೆ 25 ದಿನಗಳ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಸಹಜವಾಗಿ ಸಂಭ್ರಮ ತಂದಿದೆ.

ಜತೆಗೆ ತಮಿಳು ಮತ್ತು ಹಿಂದಿಯಿಂದಲೂ ಭಾರೀ ಡಿಮಾಂಡ್‌ ಕ್ರಿಯೇಟ್‌ ಆಗಿದೆ. ಕ್ರಿಕೆಟ್ ಮತ್ತು ಇತರ ಸಿನಿಮಾಗಳ ಕಾಂಪಿಟೇಷನ್ ಮಧ್ಯೆಯೂ ಐ ಲವ್ ಯು ಚಿತ್ರಕ್ಕೆ ಯಾವುದೇ ಅಡಚಣೆಯಾಗದೇ ನಿರೀಕ್ಷಿಗೂ ಮೀರಿ ಯಶಸ್ಸನ್ನು ಗಳಿಸುತ್ತಿರುವುದು ನಿರ್ದೇಶಕ ಆರ್ ಚಂದ್ರ ಸಂತಸಕ್ಕೆ ಕಾರಣವಾಗಿದೆ.

ಇನ್ನಷ್ಟು ಓದಿರಿ

Scroll to Top