ಜೀವನದ ಅತ್ಯುತ್ತಮ ಚುಂಬನ ಸವಿದ ಸಂಯುಕ್ತ ಹೆಗಡೆ!

Picture of Cinibuzz

Cinibuzz

Bureau Report

ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ನಂತರ ಕಾಲೇಜ್ ಕುಮಾರನಿಗೆ ಜತೆಯಾಗಿದ್ದ ಸಂಯುಕ್ತಾ ಆನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಆನಂತರ ಬರೀ ಅನಗತ್ಯ ವಿಚಾರಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದ ಸಂಯುಕ್ತಾ ಟ್ರೋಲಿಗರಿಗೆ ತಿಂಗಳುಗಟ್ಟಲೇ ಬಾಡೂಟವೂ ಆಗಿದ್ದರು. ಅದರ ಮಧ್ಯೆ ಸಂಯುಕ್ತಾ ಹೆಗಡೆ ಕ್ರಿಸ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಚಾಲ್ತಿಗೆ ಬಂದಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ವಿದೇಶಿ ಹುಡುಗನೊಂದಿಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದ್ದವು.

ಇದೀಗ ಸಂಯುಕ್ತ ಹೆಗಡೆ ಕಿಸ್ ಮಾಡುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದು, ‘ಇದು ನನ್ನ ಜೀವನದ ಅತ್ಯುತ್ತಮ ಚುಂಬನ’ ಎಂದು ಬರೆದುಕೊಂಡಿದ್ದಾರೆ! ಈ ಫೋಟೋವೀಗ ಸಖತ್ ಸದ್ದು ಮಾಡುತ್ತಿದೆ. ಜೆಕ್ ಭಾಗದಲ್ಲಿ ಸುತ್ತಾಟ ನಡೆಸುತ್ತಿರುವ ಸಂಯುಕ್ತಾ ಗೆ ಕ್ರಿಸ್ ಸಾವರ್ ಕೂಡ ಸಾಥ್ ನೀಡಿದ್ಧಾರೆ. ಈ ವೇಳೆ ಟೆಡ್ಡಿ ಬೇರ್ ಗೆ ಸಂಯುಕ್ತಾ ಚುಂಬಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top