ರಿಲೀಸ್ ಗೂ ಮುನ್ನವೇ ನನ್ನ ಪ್ರಕಾರ ಸೀಕ್ವೆಲ್ ಅನೌನ್ಸ್!

Picture of Cinibuzz

Cinibuzz

Bureau Report

ಕೃಷ್ಣ ಸುಂದರಿ ಪ್ರಿಯಾಮಣಿ ಮತ್ತು ಕಿಶೋರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನನ್ನ ಪ್ರಕಾರ ಚಿತ್ರದ ಮೋಷನ್ ಫೋಸ್ಟರ್ ಇತ್ತೀಚಿಗಷ್ಟೇ ರಿಲೀಸ್ ಆಯಿತು. ಇನ್ನು ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆಯಂತೆ. ಆದರೆ ಅದಕ್ಕೂ ಮುನ್ನ ನನ್ನ ಪ್ರಕಾರದ ಕುರಿತಾಗಿ ಹೊಸ ವಿಚಾರವೊಂದು ರಿವೀಲ್ ಆಗಿದ್ದು, ನನ್ನ ಪ್ರಕಾರ ಚಿತ್ರವನ್ನು ಥಿಯರಿ 2 ಅಡಿ ಬರಹದಲ್ಲಿ ಇನ್ನೊಂದು ಸಿನಿಮಾ ಮಾಡಲು ವಿನಯ್ ಬಾಲಾಜಿ ಕಥೆ ಸಿದ್ದಪಡಿಸಿಕೊಂಡಿದ್ದಾರಂತೆ.

‘ನನ್ನ ಪ್ರಕಾರ; ಥಿಯರಿ 1’ ತನಿಖೆ ಹಿನ್ನಲೆಯಲ್ಲಿ ಕಥೆ ಸಾಗಲಿದ್ದು, ಚಿತ್ರದ ಕೊನೆಯಲ್ಲಿ ಸಣ್ಣ ಟ್ವಿಸ್ಟ್ ನೀಡಿದ್ದಾರಂತೆ. ಆ ಟ್ವಿಸ್ಟ್​ನ ಮುಂದುವರಿದ ಭಾಗ ಪಾರ್ಟ್ 2 ರೂಪದಲ್ಲಿ ಮೂಡಿಬರಲಿದೆ ಎಂಬುದು ನಿರ್ದೇಶಕರ ಅಂಬೋಣ. ಆದರೆ ಎರಡನೇ ಸೀಕ್ವೆಲ್ ನಲ್ಲೂ ಮೊದಲಿದ್ದ ತಾರಾಂಗಣವೇ ಇರುವುದೋ ಇಲ್ಲವೋ ಎಂಬುದನ್ನು ಮಾತ್ರ ನಿರ್ದೇಶಕರು ರಹಸ್ಯವಾಗಿಟ್ಟಿದ್ದಾರೆ.  ನನ್ನ ಪ್ರಕಾರ ಸೀಕ್ವೆಲ್ ಒಂದರಲ್ಲಿ ವೈದ್ಯೆಯಾಗಿ ಪ್ರಿಯಾಮಣಿ, ಪೊಲೀಸ್ ಅಧಿಕಾರಿಯಾಗಿ ಕಿಶೋರ್ ನಟಿಸಿದ್ದಾರೆ. ಮುಂದಿನ ಭಾಗದಲ್ಲಿ ಈ ಕಲಾವಿದರೇ ನಟಿಸುವ ಸಾಧ್ಯತೆಗಳಿವೆಯಂತೆ.

ಇನ್ನಷ್ಟು ಓದಿರಿ

Scroll to Top