ಯಾನ ಟ್ರೇಲರ್ ಗೆ ರಾಕಿಂಗ್ ಸ್ಟಾರ್ ಮೆಚ್ಚುಗೆ!

Picture of Cinibuzz

Cinibuzz

Bureau Report

ವಿಜಯಲಕ್ಷ್ಮಿ ಮತ್ತು ಜೈ ಜಗದೀಶ್ ಮಕ್ಕಳಾದ ವೈಭವಿ, ವೈನಿಧಿ, ವೈಸಿರಿ ನಟನೆಯ ಯಾನ ಚಿತ್ರದ ಟ್ರೇಲರ್ ನೋಡಿದ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೇಲರ್ ನೋಡಿದ ಯಶ್, ‘ಟ್ರೇಲರ್‌ ನೋಡಿದಾಗ ಮೊಗ್ಗಿನ ಮನಸ್ಸು ಚಿತ್ರದ ನವಿರಾದ ಟ್ರಾವೆಲ್‌ ನೆನಪಾಯಿತು. ಯುವ ಸಮೂಹವೇ ಇರುವ ಚಿತ್ರದ ಟ್ರೇಲರ್‌ ಫ್ರೆಶ್‌ ಎನ್ನಿಸುತ್ತಿದೆ” ಎಂದಿದ್ದಾರೆ.

ಇನ್ನು ಯಾನ ಚಿತ್ರದಲ್ಲಿ ವೈನಿಧಿ, ವೈಸಿರಿ, ವೈಭವಿ ಪಾತ್ರ ಎಂತದ್ದು ಎಂಬುದನ್ನು ಮಾತ್ರ ಸೀಕ್ರೆಟ್ ಆಗಿಟ್ಟಿರುವ ನಿರ್ದೇಶಕಿ ವಿಜಯಲಕ್ಷ್ಮಿ ಥಿಯೇಟರ್ ನಲ್ಲಿ ಉತ್ತರ ಕೊಡುವುದಾಗಿಯೂ ತಿಳಿಸಿದ್ದಾರೆ. ಯಾನದಲ್ಲಿ ಅನಂತ್ ನಾಗ್ ಮತ್ತು ಸುಹಾಸಿನಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top