ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ ಶಾನ್ವಿ!

Picture of Cinibuzz

Cinibuzz

Bureau Report

ಚಂದ್ರಲೇಖ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟವರು ಶಾನ್ವಿ ಶ್ರೀವಾತ್ಸವ್. ಆ ಚಿತ್ರದ ಯಶಸ್ಸಿನ ನಂತರ ಮಾಸ್ಟರ್ ಪೀಸ್, ಭಲೇ ಜೋಡಿ, ಸುಂದರಾಂಗ ಜಾಣ, ಸಾಹೇಬ, ತಾರಕ್ ಸೇರಿದಂತೆ ಬಹುತೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅವರು, ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿದ್ದಾರೆ. ಸದ್ಯ ಅವನೇ ಶ್ರೀಮನ್ನಾರಾಯಣ, ಗೀತಾ, ರವಿಚಂದ್ರ ಸಿನಿಮಾ ಕೆಲಸವನ್ನು ಕಂಪ್ಲೀಟ್ ಮಾಡಿಕೊಂಡಿದ್ದು, ಫಿಟ್ ನೆಸ್ ನತ್ತ ಫೋಕಸ್ ಮಾಡಿದ್ದಾರೆ. ಜಿಮ್ ನಲ್ಲಿ ಬಿಡುವಿಲ್ಲದೇ ವರ್ಕ್ ಔಟ್ ಸಹ ಮಾಡುತ್ತಿದ್ದಾರೆ. ಇತ್ತೀಚಿಗೆ ಶಾನ್ವಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಒಂದೇ ರೀತಿ ಕಸರತ್ತುಗಳನ್ನು ಮಾಡದೇ ಪ್ರತಿ ಎರಡು ತಿಂಗಳಿಗೊಮ್ಮೆ ಅಭ್ಯಾಸವನ್ನು ಬದಲಿಸಿಕೊಳ್ಳುತ್ತಾರಂತೆ. ಈಗಾಗಲೇ ಕುದುರೆ ಸವಾರಿ, ಕಿಕ್ ಬಾಕ್ಸಿಂಗ್ ಕಲಿಯುವ ಮೂಲಕ ದೇಹ ಟೋನಿಂಗ್ ಮಾಡಿಕೊಂಡಿದ್ದ ಶಾನ್ವಿ ಇದೀಗ ಪಿ ಆರ್ ಎಕ್ಸ್ ಎಂಬ ಹೊಸ ಬಗೆಯ ವರ್ಕ್ ಔಟ್ ಆರಂಭಿಸಿದ್ಧಾರಂತೆ. ಅವನೇ ಶ್ರೀಮನ್ನಾರಾಯಣ ಹೈಪ್ ನಲ್ಲಿರುವ ಶಾನ್ವಿಗೆ ಹತ್ತಾರು ಆಫರ್ ಗಳು ನಿರೀಕ್ಷೆಗೂ ಮೀರಿ ಬರುತ್ತಿದ್ದರೂ ಕಥೆಗಳ ಅಯ್ಕೆಯಲ್ಲಿ ಚ್ಯೂಸಿಯಾಗಿದ್ದಾರಂತೆ. ಕನ್ನಡ ಮಾತ್ರವಲ್ಲದೇ ಬಾಲಿವುಡ್ ನಿಂದಲೂ ಆಫರ್ ಗಳು ಬರುತ್ತಿದ್ದು, ಸದ್ಯದಲ್ಲಿಯೇ ಅಪ್ ಕಮಿಂಗ್ ಪ್ರಾಜೆಕ್ಟ್ ಗಳ ಕುರಿತಾಗಿ ಅಧಿಕೃತ ಮಾಹಿತಿ ಶೇರ್ ಮಾಡಲಿದ್ಧಾರೆ.

ಇನ್ನಷ್ಟು ಓದಿರಿ

Scroll to Top