ತೆಲುಗಿನ ರಿಮೇಕ್ ನಲ್ಲಿ ಕಿಂಗ್ ಖಾನ್!

Picture of Cinibuzz

Cinibuzz

Bureau Report

ಜೀರೋ ಸಿನಿಮಾ ಫೇಲ್ಯೂರ್ ನ ನಂತರ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಸಾಕಷ್ಟು ನಿರ್ದೇಶಕರು ಹೊಸ ಸಿನಿಮಾಗಾಗಿ ಎಷ್ಟೇ ಕಥೆ ಹೇಳಿದ್ದರೂ ಸಹ ಶಾರುಖ್ ಅದ್ಯಾಕೋ ಎಲ್ಲವನ್ನೂ ರಿಜೆಕ್ಟ್ ಮಾಡುತ್ತಲೇ ಬಂದಿದ್ದರು. ಸದ್ಯ ಶಾರುಖ್ ಖಾನ್ ತೆಲುಗು ಜರ್ಸಿ ಸಿನಿಮಾವನ್ನು ನೋಡಿ ಫಿದಾ ಆಗಿದ್ದು, ಅದರ ಹಿಂದಿ ರಿಮೇಕ್ ನಲ್ಲಿ ಕಿಂಗ್ ಖಾನ್ ನಟಿಸುತ್ತಾರೆಂಬ ಮಾಹಿತಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ.

ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಜರ್ಸಿಯ ಹಿಂದಿ ರೈಟ್ಸ್ ನ್ನು ಕರಣ್ ಜೋಹರ್ ಖರೀದಿಸಿದ್ದು, ಹಿಂದಿಯಲ್ಲಿ ಜರ್ಸಿಯನ್ನು ರಿಮೇಕ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಜರ್ಸಿಯಲ್ಲಿ ನಾನಿ ಪಾತ್ರವನ್ನು ಶಾರುಖ್ ಶಾನ್ ನಟಿಸಬಹುದು ಎಂದು ಹೇಳಲಾಗುತ್ತಿದೆ. ಯಾವುದಕ್ಕೂ ಕಾದುನೋಡಬೇಕಿದೆ.

ಇನ್ನಷ್ಟು ಓದಿರಿ

Scroll to Top