ಗ್ಯಾಂಗ್ ಸ್ಟಾರ್ ವೇಷ ತೊಟ್ಟ ಪ್ರಜ್ವಲ್ ದೇವರಾಜ್!

Picture of Cinibuzz

Cinibuzz

Bureau Report

ಲವ್ವರ್ ಬಾಯ್ ಕ್ಯಾರೆಕ್ಟರ್ ಗಳಲ್ಲೇ ಹೆಚ್ಚಾಗಿ ಮಿಂಚಿದ್ದ ನಟ ಪ್ರಜ್ವಲ್ ದೇವರಾಜ್. ಇದೀಗ ಪಕ್ಕಾ ಆ್ಯಕ್ಷನ್ ಲುಕ್ ನಲ್ಲಿ ತೆರೆಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ. ಈ ಹಿಂದೆ ನಟಿಸಿದ್ದ ಗೆಳೆಯ ಸಿನಿಮಾದ ನಂತರ ಪ್ರಜ್ವಲ್ 12ನೇ ವರ್ಷದ ನಂತರ ಮತ್ತದೇ ರೀತಿಯ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಳೆಯ ಚಿತ್ರದಲ್ಲಿ ಗ್ಯಾಂಗ್​ ಸ್ಟರ್ ರೋಲ್ನಲ್ಲಿ ಮಿಂಚಿದ್ದ ಪ್ರಜ್ವಲ್​ ದೇವರಾಜ್​ ಇದೀಗ ಹೆಸರಿಡದ ಹೊಸ ಚಿತ್ರದಲ್ಲಿ ಮತ್ತೊಮ್ಮೆ ಗ್ಯಾಂಗ್​ ಸ್ಟಾರ್ ಆಗಲಿದ್ದಾರೆ. ಪ್ರಜ್ವಲ್​ ಚಿತ್ರದಲ್ಲಿ 3 ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಪ್ರಜ್ವಲ್ ಅಭಿನಯದ ಅರ್ಜುನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪಿಸಿ ಶೇಖರ್ ಈ ಹೊಸ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ. ಇನ್ನು ಹೆಸರಿಡದ ಈ ಚಿತ್ರದ ಸ್ಟೋರಿಲೈನ್​ ಕೂಡ ಡಿಫ್ರೆಂಟ್​ ಆಗಿದ್ದು, ಮಾಫೀಯಾ ಲೋಕದ ಗಂಭೀರ ಕಥಾನಕವನ್ನು ತೆರೆ ಮೇಲೆ ತರಲಿದ್ದಾರೆ. ಇನ್ನು ಪ್ರಜ್ವಲ್​ಗೆ ಜೋಡಿಯಾಗಿ ಮೊದಲ ಬಾರಿಗೆ ಆಶಿಕಾ ರಂಗನಾಥ್​ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ಚಂದನ್ ಗೌಡ ಬಂಡವಾಳ ಹೂಡುತ್ತಿದ್ದು, ಮುಂದಿನ ತಿಂಗಳಿನಿಂದ ಸಿನಿಮಾ ಸೆಟ್ಟೇರಲಿದೆ. ಜುಲೈ 4 ರ ಪ್ರಜ್ವಲ್ ಹುಟ್ಟುಹಬ್ಬದ ದಿನದಂದು ಚಿತ್ರದ ಟೈಟಲ್ ಕೂಡ ರಿವೀಲ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top