ಕಳೆದ ವರ್ಷ ರಿಲೀಸ್ ಆಗಿ ಪ್ರೇಕ್ಷಕರಿಂದ ಪ್ರಶಂಸೆ ಪಡೆದ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಮೂಲಕ ನಾಯಕ ನಟರಾಗಿ ಪರಿಚಿತರಾಗಿದ್ದ ಅವಿನಾಶ್ ಇದೀಗ ನಿರ್ದೇಶಕರಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ಅವಿನಾಶ್ ರವರು ಇದೀಗ ‘ಸೈಡ್ ವಿಂಗ್’ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅಂದ ಹಾಗೆ ಅವರು ನಿರ್ದೇಶನ ಮಾಡಿರುವ ‘ಸೈಡ್ ವಿಂಗ್’ ಚಿತ್ರದ ಟೀಸರ್ ಇಂದು ಸಂಜೆ ಯುಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.

ಇದೊಂದು ರಂಗಭೂಮಿಯ ಕಥೆಯನ್ನು ಒಳಗೊಂಡ ಸಿನಿಮಾವಾಗಿದ್ದು, ರಂಗಭೂಮಿಯಲ್ಲಿ ಸೈಡ್ ವಿಂಗ್ ಬಹಳ ಮುಖ್ಯವಾಗುತ್ತದೆ. ಚಿತ್ರದಲ್ಲಿ ರಂಗಭೂಮಿ ನಿರ್ದೇಶಕನೊಬ್ಬನ ಸುತ್ತ ನಡೆಯುವ ಕಥೆಯನ್ನು ಇಲ್ಲಿ ನೋಡಬಹುದು. ಹೀಗೆ ಇರುವ ಕಥೆಯಲ್ಲಿ ನಾಯಕ ಸುತ್ತ ಕೆಲವೊಂದು ಪಾತ್ರಗಳು ಬಂದು ಅವನ ಕುರಿತಂತೆ ವಿವರಿಸುತ್ತವೆ. ಇನ್ನು ಚಿತ್ರದ ಪಾತ್ರದಲ್ಲಿ ಅವಿನಾಶ್, ಪ್ರಿಯಾ, ಆತ್ಮಾನಂದ ವಾಸನ್, ವಂದಿತಾ, ಅನ್ವಯಾ ಶೆಟ್ಟಿ, ಪ್ರಣಯ್ ಮೂರ್ತಿ, ಅವಿನಾಶ್ ರಂಗಾಯಣ ಸೇರಿದಂತೆ ಮುಂತಾದವರಿದ್ದಾರೆ. ರಿಷಿ ಛಾಯಾಗ್ರಹಣ, ಸೂರ್ಯ ಎಸ್. ಭಾರದ್ವಾಜ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.











































