ಪ್ರಿಯಾ ಸೆರಾವ್ ಗೆ ಯೂನಿವರ್ಸ್ ಆಸ್ಟ್ರೇಲಿಯಾ ಪ್ರಶಸ್ತಿ!

Picture of Cinibuzz

Cinibuzz

Bureau Report

ಭಾರತ ಮೂಲದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಪ್ರಿಯಾ ಸೆರಾವ್ ಗೆ 2019ರ ಯೂನಿವರ್ಸ್ ಆಸ್ಟ್ರೇಲಿಯಾ ಪ್ರಶಸ್ತಿ ಲಭಿಸಿದೆ. ಮೆಲ್ಬೋರ್ನ್‌ನಲ್ಲಿ ದೇಶಾದ್ಯಂತ ಇತರ 26 ಮಹಿಳೆಯರನ್ನು ಹಿಂದಿಕ್ಕಿ ಪ್ರಿಯಾ ವಿಜಯದ ಮಾಲೆಯನ್ನು ಧರಿಸಿದ್ದಾರೆ. 26 ವರ್ಷದ ಈ ಬೆಡಗಿ, ವರ್ಷದ ಕೊನೆಯಲ್ಲಿ ನಡೆಯುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲಿದ್ದಾರೆ.

ಇದು ಪ್ರಿಯಾ ಅವರ ಮೊದಲ ಸೌಂದರ್ಯ ಸ್ಪರ್ಧೆಯಾಗಿರುವುದರಿಂದ ಪ್ರಶಸ್ತಿಯನ್ನು ಗೆದ್ದಿರುವುದು ಪ್ರಿಯಾ ಸಂತಸಕ್ಕೆ ಕಾರಣವಾಗಿದೆ. ವೆಸ್ಟರ್ನ್ ಆಸ್ಟ್ರೇಲಿಯಾದ ಬೆಲ್ಲಾ ಕಾಸಿಂಬಾ ಮತ್ತು ಇನ್ನೊಬ್ಬ ವಿಕ್ಟೋರಿಯನ್ ಮರಿಜಾನಾ ರಾಡ್ಮನೋವಿಕ್ ಅವರು 2019 ರ ಅಗ್ರ ಮೂರು ಸ್ಥಾನಗಳನ್ನು ಗಳಿಸಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನಷ್ಟು ಓದಿರಿ

Scroll to Top