ಅಲ್ಲು ಅರ್ಜುನ್ ಸಿನಿಮಾದಲ್ಲಿ ಜೋಡಿಯಾಗಿ ಆಲಿಯಾ ಸಾಧ್ಯತೆ!

Picture of Cinibuzz

Cinibuzz

Bureau Report

ಲಾಂಗ್ ಗ್ಯಾಪ್ ನ ನಂತರ ಅಲ್ಲು ಅರ್ಜುನ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದು, ಕ್ರಮವಾಗಿ ತ್ರಿವಿಕ್ರಮ್, ಸುಕುಮಾರ್, ವೇಣು ಶ್ರೀರಾಮ್ ಅವರ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ. ತ್ರಿವಿಕ್ರಮ್ ಅವರ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ನಿವೇತಾ ಪೆತುರಾಜ್ ಮುಖ್ಯ ಪಾತ್ರದಲ್ಲಿದ್ದರೆ, ಸುಕುಮಾರ್ ಅವರ ಚಿತ್ರ ರಶ್ಮಿಕಾ ಮಂದಣ್ಣ ಕನ್ ಫರ್ಮ್ ಆಗಿದ್ದಾರೆ.

ಇನ್ನು ಐಕಾನ್ ಚಿತ್ರಕ್ಕಾಗಿ ನಿರ್ಮಾಪಕ ದಿಲ್ ರಾಜು ಬಾಲಿವುಡ್ ನ ಟಾಪ್ ನಟಿಯನ್ನು ಕರೆಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯದ ಸುದ್ದಿ ಏನಂದ್ರೆ ರಾಮ್ ಚರಣ್ ಬಾಲಿವುಡ್ ನ ಆಲಿಯಾ ಭಟ್ ಅವರನ್ನು ರೆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಆರ್ ಆರ್ ಆರ್ ನಲ್ಲಿ ರಾಮ್ ಚರಣ್ ಗೆ ಜೋಡಿಯಾಗಿರುವ ಆಲಿಯಾ ಎಲ್ಲ ಅಂದುಕೊಂಡಂತಾದರೆ ಐಕಾನ್ ಚಿತ್ರದಲ್ಲಿಯೂ ಮುಂದುವರೆಯಲಿದ್ದಾರೆ.

 

ಇನ್ನಷ್ಟು ಓದಿರಿ

Scroll to Top