ದಿಯಾ ಪೋಸ್ಟರ್ ರಿಲೀಸ್ ಆಯ್ತು!

Picture of Cinibuzz

Cinibuzz

Bureau Report

ವಿಭಿನ್ನ ಕಥಾ ಹಂದರಗಳ ಮೂಲಕ ಪ್ರೇಕ್ಷಕರಲ್ಲಿ ದಿಗಿಲು ಹುಟ್ಟಿಸಿದ್ದ ನಿರ್ದೇಶಕ ಅಶೋಕ್ ಮತ್ತೊಮ್ಮೆ ನಿರ್ದೇಶನ ಮಾಡುತ್ತಿದ್ದು, ಈ ಬಾರಿ ರೊಮ್ಯಾಂಟಿಕ್ ಕಥೆಯೊಂದನ್ನು ಹೇಳಹೊರಟಿದ್ದಾರೆ. ಚಿತ್ರಕ್ಕೆ ದಿಯಾ ಎಂದು ಹೆಸರಿಟ್ಟಿದ್ದು, ಇತ್ತೀಚಿಗಷ್ಟೇ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ. ಈ ಚಿತ್ರದ ಕುರಿತು ಫೇಸ್ ಬುಕ್ ನಲ್ಲಿ ಅಧಿಕೃತವಾಗಿ ನಿರ್ದೆಶಕ ಅಶೋಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ದಿಯಾ ಸಿನಿಮಾವನ್ನು ಫ್ಯಾಮಿಲಿ ಫಿಲ್ಮ್ ಫ್ಯಾಕ್ಟರಿಯಲ್ಲಿ ಕೃಷ್ಣ ಚೈತನ್ಯ ನಿರ್ಮಾಣ ಮಾಡುತ್ತಿದ್ಧಾರೆ.

ಉಳಿದಂತೆ ವಿಶಾಲ್ ವಿಠ್ಠಲ್ ಮತ್ತು ಸೌರಭ ವಾಘಮರೆ ಛಾಯಾಗ್ರಹಂ ನವೀನ್ ರಾಜ್ ಸಂಗೀತ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. 6-5=2 ಮತ್ತು ಕರ್ವ ಯಶಸ್ಸಿನ ನಂತರ ಅಶೋಕ್ ನಿರ್ದೆಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನುಂಟು ಮಾಡಿದೆ.

ಇನ್ನಷ್ಟು ಓದಿರಿ

Scroll to Top