ಹಗಲು ಕನಸಿನಲ್ಲಿ ಮಾಸ್ಟರ್ ಆನಂದ್!

Picture of Cinibuzz

Cinibuzz

Bureau Report

ಮಾಸ್ಟರ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹಗಲು ಕನಸು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಈ ಸಿನಿಮಾವನ್ನು ದಿನೇಶ್ ಬಾಬು ನಿರ್ದೆಶನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಹಗಲು ಕನಸು ಮೂಡಿಬಂದಿದೆ.

ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರ ನಡುವೆ ನಡೆಯುವ ಘಟನೆಗಳೇ ಹಗಲು ಕನಸಿಗೆ ವಸ್ತುವಿಷಯವಾಗಿದೆ. ವಿಶೇಷವೆಂದರೆ ದಿನೇಶ್ ಬಾಬು ಹಗಲು ಕನಸು ಚಿತ್ರಕ್ಕೆ ನಿರ್ದೇಶನದ ಜತೆಗೆ ಛಾಯಾಗ್ರಹಣವನ್ನು ಮಾಡಲಿದ್ದಾರೆ. ಇನ್ನು ಚಿತ್ರದಲ್ಲಿ ಮಾಸ್ಟರ್ ಆನಂದ್, ಸನಿಹ ಯಾದವು, ನೀನಾಸಂ ಅಶ್ವಥ್, ಚಿತ್ಕಲಾ ಬಿರಾದರ್, ಮನದೀಪ್ ರೈ, ವಾಣಿಶ್ರೀ ನಟಿಸಿದ್ದಾರೆ. ಸದ್ಯದಲ್ಲೇ ಹಗಲು ಕನಸು ಬಿಡುಗಡೆಯಾಗುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top