ಶಿವನಂದಿ ಟೈಟಲ್ ರಿಜಿಸ್ಟರ್ ಮಾಡಿಸಿದ ದಿನಕರ್!

Picture of Cinibuzz

Cinibuzz

Bureau Report

ಇತ್ತೀಚಿಗೆ ರಿಲೀಸ್ ಆಗಿ ಶತದಿನೋತ್ಸವವನ್ನು ಆಚರಿಸಿಕೊಂಡು ಯಜಮಾನ ಚಿತ್ರದಲ್ಲಿ ಬಳಕೆಯಾಗಿದ್ದ ಶಿವನಂದಿ ಎಂಬ ಎಣ್ಣೆ ಬ್ರ್ಯಾಂಡ್ ನಲ್ಲಿಯೇ ಹೊಸ ಸಿನಿಮಾ ಸೆಟ್ಟೇರಲಿದೆ. ಹೌದು ಶಿವನಂದಿ ಟೈಟಲ್ ರಿಜಿಸ್ಟಾರ್ ಆಗಿದ್ದು, ವಿಶೇಷವೆಂದರೆ ಈ ಟೈಟಲನ್ನು ದರ್ಶನ್ ಸಹೋದರ ದಿನಕರ್ ತೂಗುದೀಪ್ ನೊಂದಣಿ ಮಾಡಿಸಿದ್ದಾರೆ.

ಇನ್ನು ಟೈಟಲ್ ರಿಜಿಸ್ಟಾರ್ ಮಾಡಿಸಿದ ಬೆನ್ನಲ್ಲೇ ದಿನಕರ್ ಹೊಸ ಸಿನಿಮಾ ಇದೇ ಆಗಿರಬಹುದೆಂಬ ಡೌಟು ಗಾಂಧೀನಗರದಲ್ಲಿದೆ. ಈಗಾಗಲೇ ದಿನಕರ್ ಮತ್ತು ದರ್ಶನ್ ಕಾಂಬಿನೇಷನ್ನಿನಲ್ಲಿ ಸರ್ವಾಂತರ್ಯಾಮಿ ಸಿನಿಮಾ ಅನೌನ್ಸ್ ಆಗಿದ್ದು, ಶಿವನಂದಿ ದಿನಕರ್ ಅವರ ಮತ್ತೊಂದು ಸಿನಿಮಾ ಆಗಿರಬಹುದಾ! ಎಂಬ ಊಹಾಪೋಹಗಳಿವೆ.

ಇನ್ನಷ್ಟು ಓದಿರಿ

Scroll to Top