ಕಾಣದಂತೆ ಮಾಯವಾದನು ಕ್ಯಾರೆಕ್ಟರ್ ಪ್ರೋಮೋ ರಿಲೀಸ್!

Picture of Cinibuzz

Cinibuzz

Bureau Report

ಪವರ್ ಸ್ಟಾರ್ ದನಿಯಲ್ಲಿ ಮೂಡಿಬಂದಿರೋ ಕಾಣದಂತೆ ಮಾಯವಾದನು ಸಾಂಗು ಯಾರು‌ ತಾನೇ ಕೇಳಿಲ್ಲ. ಅಪ್ಪು ಚಿಕ್ಕವರಿದ್ದಾಗ ಹಾಡಿದ ವರ್ಷನ್ ಒಂದು ಕಡೆಯಾದ್ರೆ ದೊಡ್ಡವರಾದ ಮೇಲೂ ಅದೇ ಸಾಂಗನ್ನು ಸ್ವಲ್ಪ ಫಾಸ್ಟ್ ಬೀಟ್ ನಲ್ಲೂ ಹಾಡಿಸಲಾಗಿತ್ತು. ಸದ್ಯ ಆ ಹಾಡಿನ ಸಾಲನ್ನಿಟ್ಟುಕೊಂಡೇ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾವೊಂದು ತಯಾರಾಗಿ ರಿಲೀಸ್ ಗೆ ರೆಡಿಯಾಗಿದೆ. ಆ ಚಿತ್ರಕ್ಕೆ ಕಾಣದಂತೆ ಮಾಯವಾದನು ಎಂದು ಹೆಸರಿಟ್ಟಿದ್ದು ಇತ್ತೀಚಿಗೆ ಚಿತ್ರದ ಕ್ಯಾರೆಕ್ಟರ್ ಪ್ರೋಮೋ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ವಿಶೇಷವೆಂದರೆ ಇದೇ ವಾರ ಸಿನಿಮಾ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ.

ರಾಜ ಪತ್ತಿಪಾರಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ತಾರಾಂಗಣದಲ್ಲಿ ಜಯ್ಯಮ್ಮನ ಮಗ ಖ್ಯಾತಿಯ ವಿಕಾಸ್, ಸಿಂಧೂ ಲೋಕನಾಥ್, ಸೀತಾಕೋಟೆ, ಅಚ್ಯುತ್‍ಕುಮಾರ್ ಹಾಗೂ ಧರ್ಮಣ್ಣ ಇದ್ದಾರೆ.
ಕಾಣದಂತೆ ಮಾಯವಾದನು ಚಿತ್ರದಲ್ಲಿ ಅಕಾಲಿಕವಾಗಿ ನಿಧನರಾದ ರಾಘವ್ ಉದಯ್ ಸಹ ನಟಿಸಿದ್ದು ಕ್ಯಾರೆಕ್ಟರ್‌ ಪ್ರೋಮೋದಲ್ಲಿ ಕೂಡ ಸಖತ್‌ ಆಗಿ ಮಿಂಚಿದ್ದಾರೆ.
ಈ ಚಿತ್ರವನ್ನು ಪ್ರಗತಿ ಶಾಲೆಯ ಮುಖ್ಯಸ್ಥರಾದ ಸೋಮ್ ಸಿಂಗ್, ಪುಷ್ಬಾ ಸೋಮ್ ಸಿಂಗ್ ಹಾಗೂ ಚಂದ್ರಶೇಖರ್ ನಾಯ್ಡು ನಿರ್ಮಾಣ ಮಾಡಿದ್ದಾರೆ.
ಉಳಿದಂತೆ ಸುಜ್ಞಾನ ಅವರ ಕ್ಯಾಮೆರಾವರ್ಕ್ ಹಾಗೂ ಗುಮ್ಮಿನೇನಿ ವಿಜಯ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top