ಫೈವ್ ಸ್ಟಾರ್ ಫಿಲಂಸ್ ಲಾಂಛನದಲ್ಲಿ ನಂದಕುಮಾರ್ ಎನ್., ಅರವಿಂದ ಮೂರ್ತಿ ಟಿ.ಎಸ್., ರಾಧಾಕೃಷ್ಣ ಸಿ.ಎಸ್., ಕಿಶೋರ್ ಮೇಗಳಮನೆ ನಿರ್ಮಿಸುತ್ತಿರುವ ಆಪರೇಷನ್ ನಕ್ಷತ್ರ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಪಕ್ಕಾ ಸಸ್ಪೆನ್ಸ್ ಸಿನಿಮಾವಾಗಿರಲಿದೆ. ನಾವೊಬ್ಬರಿಗೆ ದ್ರೋಹ ಮಾಡಿದರೆ ನಮಗೆ ಮತ್ತೊಬ್ಬರು ಹೇಗೆ ಖೆಡ್ಡಾಕ್ಕೆ ತಳ್ಳುತ್ತಾರೆಂಬ ಸಿಂಪಲ್ ಮೆಸೇಜ್ ಮೂಲಕ ಆಪರೇಷನ್ ನಕ್ಷತ್ರ ಕಥೆ ಹೇಳಲು ಹೊರಟಿದ್ದಾರೆ.

ಈ ಚಿತ್ರವನ್ನು ಮ಼ಧುಸೂಧನ್ ರಚಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಉಳಿದಂತೆ ವೀರ ಸಮರ್ಥ ಸಂಗೀತ, ಶಿವ ಸೀನ ಛಾಯಾಗ್ರಹಣ, ಮಧುಸೂಧನ್ ಸಂಭಾಷಣೆ, ವಿಜಯ ಭರಮಸಾಗರ ಸಾಹಿತ್ಯ, ಅರ್ಜುನ್ ಕಿಟ್ಟು ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಕಂಬಿ ರಾಜು ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಇನ್ನು ತಾರಾಬಳಗದಲ್ಲಿ ನಿರಂಜನ್ ಒಡೆಯರ್, ಅದಿತಿ ಪ್ರಭುದೇವ, ಯಜ್ಞಾ ಶೆಟ್ಟಿ, ಲಿಖಿತ್ ಸೂರ್ಯ, ಶ್ರೀನಿವಾಸ ಪ್ರಭು, ದೀಪಕ್ ರಾಜ್ ಶೆಟ್ಟಿ, ಗೋವಿಂದೇಗೌಡ, ವಿಕ್ಟರಿ ವಾಸು, ಪ್ರಶಾಂತ್ ನಟನ, ವಿಜಯಲಕ್ಷ್ಮಿ, ಅರವಿಂದ ಮೂರ್ತಿ ಟಿ.ಎಸ್. ಮುಂತಾದವರು ನಟಿಸಿದ್ದಾರೆ.











































