ರಿಲೀಸ್ ಆಯ್ತು ಲೆಕ್ಕಾಚಾರದ ಪೋಸ್ಟರ್!

Picture of Cinibuzz

Cinibuzz

Bureau Report

ಸೀಮಾ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಎಸ್. ಕುಮಾರ್ ಮತ್ತು ಆರ್ ಚಂದ್ರು ನಿರ್ಮಿಸುತ್ತಿರುವ ಲೆಕ್ಕಾಚಾರ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಸಖತ್ ರಿಸ್ಕ್ ಎಂಬ ಹಾರರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಎಂ.ಜಿ. ರಾಜ್ ಲೆಕ್ಕಾಚಾರಕ್ಕೆ ಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಲೆಕ್ಕಾಚಾರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇನ್ನು ಕಾರ್ತಿಕ್ ವೆಂಕಟೇಶ್ ಸಂಗೀತ, ರಾಜು ಶಿರಾ ಮತ್ತು ರಾಜೇಶ್ ಛಾಯಾಗ್ರಹಂ, ವಿ ರಾಮದೇವ್ ಸಾಹಸ, ಪ್ರಶಾಂತ್ ಸೈ ಗೀತಾ ನೃತ್ಯ ಸಂಯೋಜನೆ, ದುರ್ಗಾ ಪಿ.ಎಸ್. ಸಂಕಲನ ಚಿತ್ರಕ್ಕಿದೆ. ಲೆಕ್ಕಾಚಾರದಲ್ಲಿ  ಹರ್ಷ್ ಯಶಸ್ವಿ, ಪ್ರೀತಂ, ಚನ್ನಪ್ಪ ಬಿ., ನರಸಿಂಹ, ನಟರಾಜ್, ಆರ್ ಚಂದ್ರು, ಎಂ.ಎಸ್. ಕುಮಾರ್. ಮಂಜುನಾಥ್, ಅಮಿತ್, ರಾಮಚಂದ್ರ ಕೆ.ವಿ., ಸುರೇಶ್, ಬಲರಾಂ, ಮುತ್ತುಂ, ಪೂಜಾ, ಮೀನಾ, ಪ್ರಿಯಾಂಕಾ, ರೇಖಾ, ವಿಜಯ್, ತೆಲಂಗಾಣ ರವಿ, ಶಿವು ಮುಂತಾದವರ ಬಹುದೊಡ್ಡ ತಾರಾಬಳಗವೇ ಇದೆ.

ಇನ್ನಷ್ಟು ಓದಿರಿ

Scroll to Top