ಇನ್ಸ್ ಪೆಕ್ಟರ್ ವಿಕ್ರಮ್ ಟೀಸರ್ ರಿಲೀಸ್!

Picture of Cinibuzz

Cinibuzz

Bureau Report

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈಗಾಗಲೇ ದಾಖಲೆ ಮಟ್ಟದ ಹಿಟ್ಸ್ ನ್ನು ಟೀಸರ್ ಗಳಿಸಿದೆ. ಇನ್ನು ಜುಲೈ ಮೂರರ ಮಧ್ಯರಾತ್ರಿಯಂದು ಚಿತ್ರದ ಮತ್ತೊಂದು ವಿಶೇಷ ಟೀಸರ್ ರಿಲೀಸ್ ಆಗಲಿದ್ದು, ಬಹಳಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಈ ಸಿನಿಮಾವನ್ನು ವಿಖ್ಯಾತ್ ನಿರ್ಮಾಣ ಮಾಡಿದ್ದು, ಶ್ರೀ ನರಸಿಂಹ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಪ್ರಜ್ವಲ್ ಗೆ ಜೋಡಿಯಾಗಿ ಜಾಕಿ ಭಾವನ ನಟಿಸಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಮಫ್ತಿ ಖ್ಯಾತಿಯ ನವೀನ್ ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.  ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಜ್ವಲ್ ದೇವರಾಜ್ ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಜಂಟಲ್ ಮೆನ್, ರುದಿರಾ, ಜತೆಗೆ ಪಿ.ಸಿ. ಶೇಖರ್ ನಿರ್ದೇಶನದ ಹಾಗೂ ಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ.

ಇನ್ನಷ್ಟು ಓದಿರಿ

Scroll to Top