ಮುಂದಿನ ವಾರದಿಂದ ಪೈಲ್ವಾನ್ ಆಡಿಯೋ ಬಿಡುಗಡೆ!

Picture of Cinibuzz

Cinibuzz

Bureau Report

ಹೆಬ್ಬುಲಿ ಕೃಷ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್. ಈಗಾಗಲೇ ಬಹಳಷ್ಟು ವಿಚಾರಗಳಿಂದ ಸದ್ದು ಮಾಡುತ್ತಿರುವ ಪೈಲ್ವಾನ್ ವರಮಹಾಲಕ್ಷ್ಮೀ ಹಬ್ಬಕ್ಕೆ ಅಖಾಡಕ್ಕೆ ಇಳಿಯಲಿದೆ. ಅದಕ್ಕಿಂತ ಮೊದಲು ಚಿತ್ರತಂಡ ಪೈಲ್ವಾನ್ ಆಡಿಯೋ ಬಿಡುಗಡೆ ಮಾಡಲು ನಿರ್ಧರಿಸಿದ್ದು ಮುಂದಿನ ವಾರದಿಂದ ಒಂದಾಂದ ಮೇಲೊಂದರಂತೆ ಬಿಡುಗಡೆಯಾಗಲಿದೆ.

ಕುಸ್ತಿಪಟುವಾಗಿ ಕಿಚ್ಚ ಸುದೀಪ್ ಪೈಲ್ವಾನ್ ನಲ್ಲಿ ನಟಿಸಿದ್ದು, ಇವರಿಗೆ ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದಾರೆ. ಸುನೀಲ್ ಶೆಟ್ಟಿ ಮತ್ತು ಸುಶಾಂತ್ ಸಿಂಗ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಪೈಲ್ವಾನ್ ಕನ್ನಡ, ಹಿಂದಿ, ಮರಾಠಿ, ಭೋಜ್ಪುರಿ ಸೇರಿದಂತೆ ಬಹುಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಓದಿರಿ

Scroll to Top