ದೊಡ್ಮನೆ ಮೊಮ್ಮಗಳ ಫೋಟೋ ಶೂಟ್!

Picture of Cinibuzz

Cinibuzz

Bureau Report

ಡಾ. ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ಮತ್ತು ಅಳಿಯ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ಚಂದನವನಕ್ಕೆ ಎಂಟ್ರಿಕೊಡುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರ. ಅವರ ಮೊದಲ ಸಿನಿಮಾದ ಫೊಟೋ ಶೂಟ್ ಇತ್ತೀಚಿಗಷ್ಟೇ ನೆರವೇರಿದ್ದು, ಧನ್ಯ ಖುಷಿ ಖುಷಿಯಲ್ಲಿ ಭಾಗಿಯೂ ಆಗಿದ್ದಾರೆ.

ಧನ್ಯಾ ರಾಮ್ ಕುಮಾರ್ ಅವರ ಚೊಚ್ಚಲ ಸಿನಿಮಾವನ್ನು ಸುಮನ್ ಜಾದುಗರ್ ನಿರ್ದೇಶನ ಮಾಡುತ್ತಿದ್ದಾರೆ. ವೈಟ್ ಅಂಡ್ ಗ್ರೇ ಮೀಡಿಯಾ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಬಹಳಷ್ಟು ಭರವಸೆಯ ನಾಯಕಿಯನ್ನು ಚಂದನವನಕ್ಕೆ ಲಾಂಚ್ ಮಾಡಿರುವ ದೊಡ್ಮನೆಯಿಂದ ಚೊಚ್ಚಲ ಬಾರಿಗೆ ಒಬ್ಬ ನಾಯಕಿಯ ಪ್ರವೇಶವಾಗುತ್ತಿದೆ. ಸೂರಜ್ ಮತ್ತು ಧನ್ಯಾ ಕಾಂಬಿನೇಷನ್ನಿನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದ್ದು, ಚಿತ್ರಕ್ಕೆ ಇನ್ನೂ ಟೈಟಲ್ ನಿಗದಿಯಾಗಿಲ್ಲ.

ಇನ್ನಷ್ಟು ಓದಿರಿ

Scroll to Top