ಬಿಗ್ ಬಾಸ್ ಸ್ಪರ್ಧಿಯ ಸ್ಟುಡಿಯೋ ಲೋಕಾರ್ಪಣೆ!

Picture of Cinibuzz

Cinibuzz

Bureau Report

ಕಳೆದ ಬಿಗ್ ಬಾಸ್ ಸೀಸನ್ 6ರಲ್ಲಿ ಬಹಳಷ್ಟು ಸುದ್ದಿಯಲ್ಲಿದ್ದ ಕಂಟೆಸ್ಟೆಂಟ್ ಅಕ್ಷತಾ ಪಾಂಡವಪುರ. ಬಿಗ್ ಬಾಸ್ ಶೋ ಮುಗಿದ ಮೇಲೂ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಆಕೆ ಏನಾದ್ರೂ ಅನ್ನೋ ಪ್ರಶ್ನೆಗೆ ಉತ್ತರವೇ ಸಿಕ್ಕಿರಲಿಲ್ಲ. ಆದರೆ ಅಕ್ಷತಾ ಕುರಿತಾಗಿ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಬಿಗ್ ಬಾಸ್ ನಲ್ಲಿ ಅಕ್ಷತಾ ಸದಾ ಹೇಳಿಕೊಳ್ಳುತ್ತಿದ್ದಂತೆ ಆಕೆಯ ದೊಡ್ಡ ಕನಸು ಆ್ಯಕ್ಟಿಂಗ್ ಸ್ಟುಡಿಯೋ ಮತ್ತು ಅಕ್ಷತಾಸ್ ಕಿಚನ್ ಸ್ಟುಡಿಯೋ ನಿನ್ನೆ ಉದ್ಘಾಟನೆಯಾಗಿದೆ.

ಈ ಸ್ಟುಡಿಯೋದಲ್ಲಿ ಅಕ್ಷತಾ ನಟನೆಯ ಕ್ಲಾಸಿನ ಜತೆಗೂ ಅಡುಗೆ ತರಗತಿಗಳನ್ನು ನಡೆಸಲಿದ್ದಾರಂತೆ. ಹೌದು ಬಿಗ್ ಬಾಸ್ ಮನೆಯಲ್ಲಿ ಸದಾ ರುಚಿ ರುಚಿಯಾದ ಅಡುಗೆ ಮಾಡಿ ಉಳಿದ ಸ್ಪರ್ಧಿಗಳಿಗೆ ಬಡಿಸುತ್ತಿದ್ದ ಅಕ್ಷತಾ ಅಡುಗೆ ತರಗತಿಗಳನ್ನು ಪ್ರಾರಂಭಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top