ಮೆಂಟಲ್ ಹೈ ಕ್ಯಾ ಟೈಟಲ್ ಬದಲಾಯ್ತು!

Picture of Cinibuzz

Cinibuzz

Bureau Report

ಕಂಗನಾ ರಣಾವತ್ ಮತ್ತು ರಾಜ್ ಕುಮಾರ್ ರಾವ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಮೆಂಟಲ್ ಹೈ ಕ್ಯಾ. ಈ ಸಿನಿಮಾವನ್ನು ಪ್ರಕಾಶ್ ಕೋವೆಲಮೂಡಿ ನಿರ್ದೇಶನ ಮಾಡಿದ್ದು, ಬಾಲಾಜಿ ಟೆಲಿ ಫಿಲಂಸ್ ಚಿತ್ರಕ್ಕೆ ಬಂಡವಾಳವನ್ನು ಹೂಡಿದೆ. ಚಿತ್ರದ ಫೋಸ್ಟರ್ ರಿಲೀಸ್ ಆಗುತ್ತಿದ್ದಂತೆ ವಿವಾದಗಳೂ ಸೃಷ್ಟಿಯಾಗಿದ್ದು, ಮಾನಸಿಕ ರೋಗಿಗಳನ್ನು ಅವಮಾನಿಸುವಂತೆ ಶೀರ್ಷಿಕೆ ಇಡಲಾಗಿದೆ ಎಂದು ಇಂಡಿಯನ್ ಸೈಕಿಯಾರ್ಟಿಸ್ಟ್ ಸೊಸೈಟಿ ಹಾಗೂ ದೀಪಿಕಾ ಪಡುಕೋಣೆ `ದಿ ಲೈವ್ ಲಾಫ್ ಫೌಂಡೇಷನ್ ಚಿತ್ರತಂಡ ಜತೆಗೆ ಸಿ ಬಿ ಎಫ್ ಸಿ ಮುಖ್ಯಸ್ಥ ಪರಸೂನ್ ಜೋಷಿಗೆ ಪತ್ರವನ್ನು ರವಾನಿಸಿದ್ದರು. ಚಿತ್ರದ ಶೀರ್ಷಿಕೆ ಬದಲಿಸುವಂತೆಯೂ ವಿನಂತಿಸಿಕೊಂಡಿದ್ದರು. ಅದಾದ ಮೇಲೆ ಇತ್ತೀಚಿಗೆ ಸಿ ಬಿ ಎಫ್ ಸಿಯನ್ನು ಕಂಗನಾ ಸಂಪರ್ಕಿಸಿ ಅಗತ್ಯ ಬಿದ್ದರೆ ಶೀರ್ಷಿಕೆ ಬದಲಿಸಲು ಸಿದ್ದವಿರುವುದಾಗಿಯೂ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರದ ಶೀರ್ಷಿಕೆಯನ್ನು ಮೆಂಟಲ್ ಹೈ ಕ್ಯಾ ಬದಲಾಗಿ ಜಡ್ಜ್ ಮೆಂಟಲ್ ಹೈ ಕ್ಯಾ ಎಂದು ಬದಲಿಸಲಾಗಿದೆಯಂತೆ.

ಈಗಾಗಲೇ ಚಿತ್ರೀಕರಣವನ್ನು ಮುಗಿಸಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಜುಲೈ 26ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ.  ವೈವಿಧ್ಯಮಯ ಫೋಸ್ಟರ್ ಮೂಲಕವೇ ಪ್ರಚಾರ ಮಾಡುತ್ತಿರುವ ಚಿತ್ರತಂಡ  ಬಿಡುಗಡೆಗೊಳಿಸಿದ್ದ ಇಬ್ಬರೂ ಎದುರು ಬದುರು ನಿಂತು, ನಾಲಿಗೆಯನ್ನು ಹಾವಿನಂತೆ ಹೊರಚಾಚಿ ಅದರ ಮೇಲೆ ಬ್ಲೇಡನ್ನು ನಿಲ್ಲಿಸಿರುವ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.

ಇನ್ನಷ್ಟು ಓದಿರಿ

Scroll to Top