`ರೂಪಾಯಿ’  ಚಿತ್ರದ ಟೀಸರ್ ಬಿಡುಗಡೆ!

Picture of Cinibuzz

Cinibuzz

Bureau Report

ವಿವಿಧ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ ಅವರು ನಿರ್ಮಿಸುತ್ತಿರುವ ರೂಪಾಯಿ ಚಿತ್ರದ ಟೀಸರ್ ಇಂದು ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು, ಚಿತ್ರ ನಿರ್ದೇಶನದ ಜತೆಗೆ ವಿನೋದ್ ನಾಗ್ ಅವರೇ ನಾಯಕನಾಗಿಯೂ ಅಭಿನಯಿಸಿರುವುದು ವಿಶೇಷವಾಗಿದೆ.

ಚಿತ್ರದ ಟೈಟಲ್ಲೇ ಹೇಳುವಂತೆ ಹಣದ ಬಗೆಗಿನ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದ ಕಥೆಯನ್ನು ನಿಜ ಜೀವನಕ್ಕೆ ಹತ್ತಿರವಾಗಿ, ಸಾಂದರ್ಭಿಕ ಮನೋರಂಜನೆಯನ್ನೇ ಪ್ರಮುಖವಾಗಿಟ್ಟುಕೊಂಡು ಈ ಚಿತ್ರದ ಚಿತ್ರಕಥೆ ಹೆಣೆಯಲಾಗಿದೆಯಂತೆ. ಇನ್ನು ರೂಪಾಯಿ ತಾರಂಗಣದಲ್ಲಿ ವಿನೋದ್ ನಾಗ್, ಕೃಷಿ ತಾಪಂಡ, ಮೈತ್ರಿ ಜಗದೀಶ್, ರಾಮ್ ಚಂದನ್, ಚಂದನ ರಾಘವೇಂದ್ರ, ಅನಿಲ್ ಕುಮಾರ್,ಪ್ರಮೋದ್ ಶೆಟ್ಟಿ, ರಾಕ್‍ಲೈನ್ ಸುಧಾಕರ್, ಮೋಹನ್ ಜುನೇಜ, ಗಿರೀಶ್, ಸಂಕರಮೂರ್ತಿ, ಸವಿತಾ, ರವಿ ಕಲ್ಯಾಣ್, ಸೀತಾರಾಂ, ರಾಮಣ್ಣ ಮುಂತಾದವರು ಇದ್ದಾರೆ.

ಇನ್ನಷ್ಟು ಓದಿರಿ

Scroll to Top