ಕಮಾರ್ ಫಿಲಂ ಫ್ಯಾಕ್ಟರಿ ವತಿಯಿಂದ ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್ಸ್ ಕಾರ್ಯಕ್ರಮ!

Picture of Cinibuzz

Cinibuzz

Bureau Report

ಕಮಾರ್ ಫಿಲಂ ಫ್ಯಾಕ್ಟರಿ ಮತ್ತು ಫ್ಯಾಷನ್ ಟಿವಿ ಜಂಟಿಯಾಗಿ ನಡೆಸುತ್ತಿರುವ ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್ಸ್ ಕಾರ್ಯಕ್ರಮಕ್ಕಾಗಿ ಪ್ರತಿಭಾನ್ವೇಷಣೆ ನಡೆಸಲು ಶುಕ್ರವಾರ ಪತ್ರಿಕಾಗೋಷ್ಟಿಗೆ ಚಾಲನೆ ನೀಡಲಾಗಿದೆ. ನಗರದ ಶಾಂಘ್ರೆಲಾ ಹೋಟೆಲ್ ನಲ್ಲಿ ವುಮೆನ್ಸ್ ಡೇ ಔಟ್ ವಿತ್ ಫ್ಯಾಷನ್ ನ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ತಾರೆಯರಾದ ಸಿಂಧೂ ಲೋಕನಾಥ್, ಪ್ರಿಯಾಂಕ ಉಪೇಂದ್ರ ಮತ್ತು ನಗರದ ಮಾಡೆಲ್ ಗಳು ಅತಿಥಿಗಳಾಗಿ ಆಗಮಿಸಿದ್ದರು.

ಮಹಿಳೆಯರಿಗಾಗಿಯೇ ಆಯೋಜಿಸಿರುವ ಕಾರ್ಯಕ್ರಮ ಇದಾಗಿದ್ದು, ಮುಖ್ಯವಾಹಿನಿಗೆ ಬಾರದ ಎಲಿಜಿಬಲ್ ಪ್ರತಿಭೆಗಳನ್ನು ಹೊರತರುವ ಉದ್ದೇಶ ಈ ಕಾರ್ಯಕ್ರಮದಾಗಿದೆಯಂತೆ. ಫ್ಯಾಷನ್ ಜಗತ್ತಿಗೆ ಪ್ರವೇಶ ಪಡೆಯಬೇಕೆಂಬ ಹಂಬಲದಲ್ಲಿರುವ 18 ರಿಂದ 50 ವಯಸ್ಸಿನ ವಯೋಮಾನದ ಮಹಿಳೆಯರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊ‍ಳ್ಳಬಹುದಾಗಿದೆ. ಈ ಕಾರ್ಯಕ್ರಮದ ಮೂಲಕ ಮಾರ್ಜಾಲ ನಡಿಗೆಯನ್ನು ಪ್ರದರ್ಶಿಸಬೇಕೆನ್ನುವವರು ಈಗಲೇ ನಿಮ್ಮ ಸಂಪೂರ್ಣ ವಿವರಗಳು, ಭಾವಚಿತ್ರ ಮತ್ತು ವೈಟಲ್ ಸ್ಟ್ಯಾಟಿಕ್ಸ್ ನ್ನು ಜುಲೈ 30ರ ಒಳಗಾಗಿ ಇಮೇಲ್ ಮಾಡಬಹುದು. ಇಮೇಲ್: reethu.kamarfilmfactory@gmail.com ಅಗತ್ಯವಿದ್ದವರೂ ಕರೆ ಮಾಡಿ ವಿವರವಾದ ಮಾಹಿತಿಯನ್ನು ಪಡೆಯಬಹುದು. ಕಛೇರಿ ಫೋನ್ ನಂ +918048539501

ಇನ್ನಷ್ಟು ಓದಿರಿ

Scroll to Top