ದಂಗಲ್ ಹುಡುಗಿ ನಟನೆಯ ಗುಡ್ ಬೈ!

Picture of Cinibuzz

Cinibuzz

Bureau Report

ಅಮಿರ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ದಂಗಲ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಝೈರಾ ವಾಸಿಂ ಚಿಕ್ಕವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ದಂಗಲ್ ಯಶಸ್ಸಿನ ನಂತರ ಸತತ ಐದು ವರ್ಷಗಳಿಂದ ಸಕ್ರಿಯರಾಗಿದ್ದ ಝೈರಾ ಬಣ್ಣದ ಲೋಕಕ್ಕೆ ಬೈ ಬೈ ಹೇಳಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

“ಚಿತ್ರ ಜಗತ್ತು ನನಗೆ ಸಂತಸ ತಂದಿಲ್ಲ. ನಂಬಿಕೆ ಹಾಗೂ ಧರ್ಮದ ಮೇಲೆ ಹಸ್ತಕ್ಷೇಪ ಮಾಡುತ್ತದೆ. ಈ ಕಾರಣದಿಂದ ನಾನು ಚಿತ್ರರಂಗ ತೊರಿಯುವ ನಿರ್ಧಾರ ಮಾಡಿದ್ದೀನಿ” ಎಂದು ಬರೆದುಕೊಂಡಿದ್ದಾರೆ.
ದಂಗಲ್ ಚಿತ್ರದಲ್ಲಿ ಗೀತಾ ಪೋಗಟ್ ಪಾತ್ರದಲ್ಲಿ ಮಿಂಚಿದ್ದ ಝೈರಾ ಆನಂತರ ಸೀಕ್ರೆಟ್ ಸೂಪರ್ ಸ್ಟಾರ್, ದಿ ಸ್ಕೈ ಈಸ್ ಪಿಂಕ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಆದ್ರೀಗ ಧಿಡೀರನೇ ಝೈರಾ ಕೊಟ್ಟ ಸುದ್ದಿ ಅಭಿಮಾನಿಗಳಿಗೆ ಬೇಸರ ತಂದಿದೆ.

ಇನ್ನಷ್ಟು ಓದಿರಿ

Scroll to Top