ಸೆಪ್ಟೆಂಬರ್ ಗೆ ಭರಾಟೆ ಬಿಡುಗಡೆ!

Picture of Cinibuzz

Cinibuzz

Bureau Report

ಮಫ್ತಿ ಸಿನಿಮಾದ ಬಳಿಕ ರೋರಿಂಗ್ ಸ್ಟಾರ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಭರಾಟೆ. ಈ ಚಿತ್ರವನ್ನು ಬಹದ್ದೂರ್, ಭರ್ಜರಿ ಖ್ಯಾತಿಯ ಚೇತನ್ ನಿರ್ದೇಶನ ಮಾಡುತ್ತಿದ್ದು, ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ನೋಡುಗರ ಕಣ್ ಮನಸೆಳೆದಿರುವ ಭರಾಟೆ ಬಿಡುಗಡೆಯ ದಿನಾಂಕವನ್ನು ಅನೌನ್ಸ್ ಮಾಡಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಹೌದು ಭರಾಟೆ ಸಿನಿಮಾವನ್ನು ಸೆಪ್ಟೆಂಬರ್ 27ರಂದು ಬಿಡುಗಡೆ ಮಾಡಲು ಚಿತ್ರತಂಡವನ್ನು ಡಿಸೈಡ್ ಮಾಡಿದ್ದು, ಸದ್ಯ ಫೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಭರಾಟೆ ಬ್ಯುಸಿಯಾಗಿದೆ. ಭರಾಟೆಯಲ್ಲಿ ಮುರಳಿಗೆ ಶ್ರೀ ಲೀಲಾ ನಾಯಕಿಯಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಚೇತನ್ ನಿರ್ದೇಶನ ಮಾಡಿರುವ ಮೂರನೇ ಸಿನಿಮಾವಾಗಿದ್ದು, ಹ್ಯಾಟ್ರಿಕ್ ಸಕ್ಸಸ್ ನ ನಿರೀಕ್ಷೆಯಲ್ಲಿ ಅವರಿದ್ದಾರೆ.

ಇನ್ನಷ್ಟು ಓದಿರಿ

Scroll to Top