ಯುವರತ್ನ ಬಳಗಕ್ಕೆ ಪ್ರಕಾಶ್ ರಾಜ್!

Picture of Cinibuzz

Cinibuzz

Bureau Report

ಚುನಾವಣೆಯ ಬಿಸಿಯಲ್ಲಿ ಚಿತ್ರರಂಗದಿಂದ ಗ್ಯಾಪ್ ಪಡೆದಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಪುನಃ ಬಣ್ಣದ ಲೋಕಕ್ಕೆ ವಾಪಸ್ ಆಗಿದ್ದಾರೆ. ಈ ಹಿಂದೆ ಕೆಲಸ ಮಾಡಿದ್ದ ರಾಜಕುಮಾರ ಟೀಮಿನ ಜತೆಗೆ ವಾಪಸ್ಸಾಗಿರುವ ಅವರು ಯುವರತ್ನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಷನ್ನಿನ ಎರಡನೇ ಚಿತ್ರ ಇದಾಗಿದ್ದು, ಈಗಾಗಲೇ ಯುವರತ್ನದ ಚಿತ್ರೀಕರಣದ ಕರ್ನಾಟಕದಾದ್ಯಂತ ಬಿರುಸಿನಿಂದಲೇ ಸಾಗುತ್ತಿದೆ. ದಿನಕ್ಕೊಂದು ಕೌತುಕ ಸಂಗತಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಚಿತ್ರತಂಡ ಪ್ರಕಾಶ್ ರಾಜ್ ಸೇರ್ಪಡೆಯ ಕುರಿತಾಗಿಯೂ ಮಾಹಿತಿ ಹರಿಬಿಟ್ಟಿದೆ. ಮೂಲಗಳ ಪ್ರಕಾರ ಪ್ರಕಾಶ್ ರಾಜ್ ಯುವರತ್ನದಲ್ಲಿ ಕಾಲೇಜ್ ಪ್ರಿನ್ಸಿಪಾಲ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆಂದು ಹೇಳಲಾಗುತ್ತಿದ್ದು, ಅಧಿಕೃತ ಮಾಹಿತಿಯಷ್ಟೇ ಹೊರಬೀಳಬೇಕಿದೆ. ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ, ರಾಜಕುಮಾರ್ ಸಿನಿಮಾದ ನಂತರ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಅವರಿದ್ದಾರೆ.

ಇನ್ನಷ್ಟು ಓದಿರಿ

Scroll to Top