ಹೊರಬಿತ್ತು ಗೋಲ್ಡನ್ ಸ್ಟಾರ್ `ಗೀತಾ’ ಟೀಸರ್!

Picture of Cinibuzz

Cinibuzz

Bureau Report

ಗೋಲ್ಡನ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಗಣೇಶ್ ಅಭಿನಯದ ಗೀತಾ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಒಂದು ನಿಮಿಷ ಐವತ್ತೇಳು ಸೆಕೆಂಡಿನ ಈ ಟೀಸರಿನಲ್ಲಿ ಗೋಕಾಕ್ ಚಳವಳಿಯ ಕೆಲ ತುಣುಕುಗಳನ್ನು ಕಾಣಬಹುದಾಗಿದೆ. “ದುಡ್ಡುಕೊಟ್ಟು ಕರ್ನಾಟಕದ ನಕ್ಷೆ ಕೊಂಡುಕೊಳ್ಳಬಹುದು, ಕನ್ನಡದ ಬಾವುಟವನ್ನು ಕೊಂಡುಕೊಳ್ಳಬಹುದು. ಆದರೆ ಕನ್ನಡಿಗರ ಸ್ವಾಭಿಮಾನವನಲ್ಲ” ಎಂಬ ರಗಡ್ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಡುವ ಗೋಲ್ಡನ್ ಸ್ಟಾರ್ ಟೀಸರ್ ಮೂಲಕವೇ ಅಪ್ಪಟ ಕನ್ನಡಿಗನಾಗಿ ಅಬ್ಬರಿಸಿದ್ದಾರೆ.

99 ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ಗೀತಾ ಚಿತ್ರದಲ್ಲಿ ಅಭಿನಯಿಸಿದ್ದು, ಶಾನ್ವಿ ಶ್ರೀವಾತ್ಸವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ನಾಯಕಿಯರಾಗಿ ಜತೆಯಾಗಿದ್ದಾರೆ. ವಿಶೇಷ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ. ಗೀತಾ ಚಿತ್ರವನ್ನು ವಿಜಯ ನಾಗೇಂದ್ರ ರಚಿಸಿ ನಿರ್ದೇಶಿಸಿದ್ದಾರೆ. ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಸಹ ನಿರ್ಮಾಣದಲ್ಲಿ ಗೀತಾ ಮೂಡಿಬರಲಿದೆ. ಎಲ್ಲ ಅಂದುಕೊಂಡಂತಾದರೆ ಗೀತಾ ಸದ್ಯದಲ್ಲೇ ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top