ದೇವಕಿಗೆ ಉಪ್ಪಿ ವಾಯ್ಸು!

Picture of Cinibuzz

Cinibuzz

Bureau Report

ಸದ್ಯ ಸ್ಯಾಂಡಲ್ ವುಡ್ ನಲ್ಲಿ ದೇವಕಿಯ ಹೀಟು ನೋಡುಗರ ನಿದ್ದೆಗೆಡಿಸಿದೆ. ಈಗಾಗಲೇ ಟ್ರೇಲರ್ ಮತ್ತು ಟೀಸರ್ ಮೂಲಕ ಭರವಸೆ ಮೂಡಿಸಿರುವ ದೇವಕಿ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಈ ವಾರ ರಿಲೀಸ್ ಆಗಲಿದೆ. ಈ ಮಧ್ಯೆ ದೇವಕಿ ಚಿತ್ರತಂಡದಿಂದ  ಇಂಟ್ರಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದ್ದು, ಪ್ರೇಕ್ಷಕರಿಗೆ ಮತ್ತಷ್ಟು ಹುಚ್ಚು ಹಿಡಿಸಿದೆ.

ಪ್ರಿಯಾಂಕ ಉಪೇಂದ್ರ ಮತ್ತು ಮಗಳು ಐಶ್ವರ್ಯಾ ಉಪೇಂದ್ರ ಚೊಚ್ಚಲ ಬಾರಿಗೆ ಒಟ್ಟಿಗೆ ನಟಿಸಿರುವ ದೇವಕಿಗೆ ಪ್ರಿಯಾಂಕ ಪತಿ ಉಪೇಂದ್ರ ಕೂಡ ಸಾಥ್ ನೀಡಿದ್ದು, ದೇವಕಿಯ ಕ್ಲೈಮ್ಯಾಕ್ಸ್ ಸೀನಿಗೆ ಧ್ವನಿ ನೀಡಿದ್ದಾರಂತೆ. ಈ ಮೂಲಕ ಇಡೀ ಕುಟುಂಬವೇ ದೇವಕಿಗಾಗಿ ಇನ್ ವಾಲ್ವ್ ಆಗಿರೋದು ಉಪ್ಪಿ ಮತ್ತು ಪ್ರಿಯಾಂಕ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸಾಕಷ್ಟು ಕೌತುಕದ ಸಂಗತಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ದೇವಕಿ ಹೆಣ್ಣು ಮಕ್ಕಳ ಮಾರಾಟ ದಂಧೆಯ ಕುರಿತು ಬೆಳಕು ಚೆಲ್ಲಲ್ಲಿದ್ದು, ಮಮ್ಮಿ ಸಿನಿಮಾ ಯಶಸ್ಸಿನ ಬಳಿಕ ಪ್ರಿಯಾಂಕ ಮತ್ತೆ ಲೋಹಿತ್ ಜತೆಯಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top