ಗಾಳಿಪಟ-2ಗೆ ಅದಿತಿ ಪ್ರಭುದೇವ್!

Picture of Cinibuzz

Cinibuzz

Bureau Report

ಪಂಚತಂತ್ರ ಸಿನಿಮಾದ ನಂತರ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಸಿನಿಮಾ ಗಾಳಿಪಟ 2. ಈ ಹಿಂದೆ ಗಣೇಶ್, ದೂದ್ ಪೇಡಾ ದಿಗಂತ್, ರಾಜೇಶ್ ಕೃಷ್ಣನ್ ಕಾಂಬಿನೇಷನ್ನಿನಲ್ಲಿ ಮೂಡಿ ಬಂದು ಬ್ಲಾಕ್ ಬಸ್ಟರ್ ಹಿಟ್ ಪಡೆದ ಗಾಳಿಪಟ ಸರಳಿಯ ಮುಂದಿನ ಚಿತ್ರ ಇದಾಗಿದೆ. ಬೆಂಗಳೂರು, ಮಂಡ್ಯ, ಧಾರವಾಡದ ವಿಭಿನ್ನ ಹಿನ್ನೆಲೆಗಳಿಗೆ ಸೇರಿದ ಮೂವರು ಯುವಕರ ಲೈಫನ್ನೇ ಭಟ್ಟರು ತಮ್ಮದೇ ಸ್ಟೈಲಿನಲ್ಲಿ ತೋರಿಸಲಿದ್ದಾರೆ. ಚಿತ್ರದ ತಾರಾಂಗಣದಲ್ಲಿ ಶರಣ್, ಪವನ್ ಕುಮಾರ್, ರಿಷಿ, ಶರ್ಮೀಳಾ ಮಾಂಡ್ರೆ ಮತ್ತು ಸೋನಾಲ್ ಮಾಂಟೆರೋ ಕೂಡ ಇದ್ದಾರೆ. ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಸದ್ಯದ ಸುದ್ದಿ ಏನಂದ್ರೆ ಯೋಗರಾಜರ ಬಳಗಕ್ಕೆ ಅದಿತಿ ಪ್ರಭುದೇವ್ ಸೇರ್ಪಡೆಯಾಗಿದ್ದಾರೆ. ಹೌದು ಇದಾಗಲೇ ಸಿಂಗ, ಆಪರೇಷನ್ ನಕ್ಷತ್ರ, ತೋತಾಪುರಿ, ರಂಗನಾಯಕಿ ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ಅದಿತಿ ಗಾಳಿಪಟ 2ಕ್ಕೂ ಎಂಟ್ರಿ ಪಡೆದಿದ್ದಾರೆ. ಈ ಸಿನಿಮಾವನ್ನು ಮಹೇಶ್ ದನಣ್ಣನವರ್ ನಿರ್ಮಾಣ ಮಾಡುತ್ತಿದ್ದು, ಚಿತ್ರೀಕರಣವನ್ನು ಕರ್ನಾಟಕ ಮತ್ತು ಲಂಡನ್ ನಲ್ಲಿ ನಡೆಸುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ. ಇನ್ನು ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ, ದ್ವೈತ ಗುರುಮೂರ್ತಿ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ ಸಾಹಿತ್ಯ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top