ಲಯನ್ ಕಿಂಗ್ ಚಿತ್ರಕ್ಕೆ ಬ್ರಹ್ಮಾನಂದಂ ದನಿ!

Picture of Cinibuzz

Cinibuzz

Bureau Report

ಬಹುಭಾಷೆಗಳಲ್ಲಿ ತಯಾರಾಗಿ ರಿಲೀಸ್ ಗೆ ರೆಡಿಯಾಗಿರುವ ಲಯನ್ ಕಿಂಗ್ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಸದ್ಯದ ಸುದ್ದಿ ಏನಂದ್ರೆ ತೆಲುಗು ವರ್ಷನ್ನಿನ ಲಯನ್ ಕಿಂಗ್ ಚಿತ್ರಕ್ಕೆ ಹಾಸ್ಯ ನಟ ಬ್ರಹ್ಮಾನಂದಂ ದನಿ ನೀಡಿದ್ದಾರಂತೆ. ಹೌದು ಲಯನ್ ಕಿಂಗ್ ಇಂಗ್ಲಿಷ್, ಹಿಂದಿ, ತಮಿಳು, ತೆಲುಗಿನಲ್ಲಿ ಬಿಡುಗಡೆಯಾಗಲಿದ್ದು, ಲಯನ್ ಕಿಂಗ್ ನ ಪುಂಬಾ ಹಾಗೂ ಟಿಮೊನ್ ಪಾತ್ರಗಳಿಗೆ ಬ್ರಹ್ಮಾನಂದಂ ದನಿ ನೀಡಿದ್ದಾರೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಬ್ರಹ್ಮಾನಂದಂ `ಲಯನ್ ಕಿಂಗ್ ನ ಅಭಿಮಾನಿಗಳಲ್ಲಿ ನನ್ನ ಮಕ್ಕಳು ಇದ್ದಾರೆ. ಮನೆ ಮಂದಿಯೆಲ್ಲಾ ಡಿಸ್ನಿ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಬಹುದು. ಸಿನಿಮಾದಲ್ಲಿ ಪುಂಬಾಗೆ ಧ್ವನಿ ನೀಡಿರುವುದು ವಿಭಿನ್ನ ಹಾಗೂ ಮೋಜಿನ ಅನುಭವವನ್ನು ನೀಡಿದೆ. ಈ ಸಿನಿಮಾವನ್ನು ತೆಲುಗು ಸಿನಿಮಾ ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸಲು ನಾನು ಎದುರು ನೋಡುತ್ತಿದ್ದೇನೆ ‘ಎಂದಿದ್ದಾರೆ. ಲಯನ್ ಕಿಂಗ್ ಜುಲೈ 9ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಇನ್ನಷ್ಟು ಓದಿರಿ

Scroll to Top