ರಜನಿ ಪುತ್ರಿಯ ಮೇಲೆ ಟ್ರೋಲಿಗರು ಗರಂ!

Picture of Cinibuzz

Cinibuzz

Bureau Report

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ತಮ್ಮ ಪುತ್ರನ ಜತೆ ಸ್ವಿಮ್ಮಿಂಗ್ ಪೂಲ್ ನಲ್ಲಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಹಳಷ್ಟು ಮೆಚ್ಚುಗೆಗಳನ್ನು ಆ ಫೋಟೋ ಗಳಿಸಿತ್ತು. ಆದರೆ ಬರು ಬರುತ್ತಾ ಕಮೆಂಟುಗಳ ಮಹಾಪೂರವೇ ಹರಿದುಬಂದಿದ್ದು, ಪೊಟೋ ಭಾರಿ ವಿವಾದಕ್ಕೆ ಕಾರಣವಾಗಿದೆ.

https://twitter.com/soundaryaarajni/status/1145253594846773249

ಸದ್ಯ ಚೆನ್ನೈನಲ್ಲಿ‌ ನೀರಿನ ಸಮಸ್ಯೆ ಉಲ್ಬಣವಾಗಿರುವ ಸಮಯದಲ್ಲಿ ಈ ರೀತಿ‌ ನೀರನ್ನು ವ್ಯರ್ಥ ಮಾಡುವ ಅವಶ್ಯಕತೆ ಏನಿತ್ತು ಎಂದು ಟ್ರೋಲಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ವಿವಾದದ ಬಿಸಿ ಏರುತ್ತಿದ್ದಂತೆ ಎಚ್ಚೆತ್ತುಕೊಂಡು ಸೌಂದರ್ಯ ಫೋಟೋಗಳನ್ನು ಡಿಲೀಟ್ ಮಾಡಿದಲ್ಲದೇ, ಮಕ್ಕಳಿಗೆ ದೈಹಿಕ ಕೆಲಸ ಹೆಚ್ಚು ಆಗಬೇಕು ಎನ್ನುವ ಸಂದೇಶ ಸಾರಲು ಈ ಫೋಟೋ ಹಾಕಿದ್ದೆ ಅಷ್ಟೆ. ಇದರಿಂದ ಜನರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಇನ್ನಷ್ಟು ಓದಿರಿ

Scroll to Top