ನಾಯಕಿಯರ ಹುಡುಕಾಟದಲ್ಲಿದ್ದಾರೆ ರಿಷಬ್ ಶೆಟ್ಟಿ!

Picture of Cinibuzz

Cinibuzz

Bureau Report

ಸದಭಿರುಚಿಯ ಸಿನಿಮಾಗಳಿಗೆ ಹೆಚ್ಚು ಫೋಕಸ್ ಮಾಡುತ್ತಿರುವ ಯುವ ನಿರ್ದೇಶಕರ ಪೈಕಿ ರಿಷಬ್ ಶೆಟ್ಟಿ ಕೂಡ ಒಬ್ಬರು. ಈಗಾಗಲೇ ಕಿರಿಕ್ ಪಾರ್ಟಿ, ರಿಕ್ಕಿ, ಸ.ಹಿಂ.ಪ್ರಾ.ಶಾ ಸೇರಿದಂತೆ ಬಹುತೇಕ ಹಿಟ್ ಸಿನಿಮಾಗಳನ್ನು ನೀಡಿರುವ ರಿಷಬ್ ಶೆಟ್ಟಿ ಬೆಲ್ ಬಾಟಂ ಚಿತ್ರದ ಮೂಲಕ ನಾಯಕನಾಗಿಯೂ ಚಂದನವನದಲ್ಲಿ ಮಿಂಚು ಹರಿಸುತ್ತಿದ್ದಾರೆ.

ಈ ಹಿಂದೆ ಪ್ರತಿಭಾವಂತ ನಿರ್ದೇಶಕರಿಗಾಗಿ ಹುಡುಕಾಟ ನಡೆಸಿದ್ದ ರಿಷಬ್ ಸದ್ಯ ನಾಯಕಿಯರ ಸರ್ಚಿಂಗ್ ನಲ್ಲಿದ್ದಾರೆ. ಹೌದು ರಿಷಬ್ ಶೆಟ್ಟಿ ಪ್ರೊಡಕ್ಷನ್ ನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಲಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ನಾಯಕಿಯಾಗಬೇಕೆಂಬ ಹಂಬಲದಲ್ಲಿರುವವರಿಗೆ ಸುವರ್ಣಾವಕಾಶವನ್ನು ನೀಡುತ್ತಿದ್ದಾರೆ. ಅಲ್ಲದೇ ಆಸಕ್ತರ ಸ್ವ ವಿವರವನ್ನು ಅಧಿಕೃತ ಇಮೇಲ್ ವಿಳಾಸಕ್ಕೆ ಕಳುಹಿಸಲು ರಿಷಬ್ ಆಹ್ವಾನ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ರಾರಾಜಿಸಬೇಕೆಂಬ ಕನಸಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಅಧಿಕೃತ ಇಮೇಲ್ ವಿಳಾಸ: audition4rsf@gmail.com

 

 

ಇನ್ನಷ್ಟು ಓದಿರಿ

Scroll to Top