ಏಕಕಾಲದಲ್ಲಿ ರಿಲೀಸ್ ಆಗಲಿದೆ `www.ಮೀನಾ ಬಜಾರ್’!

Picture of Cinibuzz

Cinibuzz

Bureau Report

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮದುವೆ ಮನೆ ಸಿನಿಮಾವನ್ನು ನಿರ್ದೇಶಿಸಿದ್ದ ರಾಣಾ ಸುನೀಲ್ ಕುಮಾರ್ ಸಿಂಗ್ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಚಿತ್ರಕ್ಕೆ www.ಮೀನಾ ಬಜಾರ್ ಎಂದು ಹೆಸರಿಟ್ಟಿದ್ದು, ಈ ಮೂಲಕ ಪ್ರೊಡಕ್ಷನ್ ಜವಾಬ್ದಾರಿಯ ಜತೆಗೆ ನಟನೆಯಲ್ಲಿಯೂ ಛಾಪು ಮೂಡಿಸಲಿದ್ದಾರೆ. ತಿತಿತಿ.ಮೀನಾ ಬಜಾರ್ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಮೈಸೂರು, ಹೈದರಾಬಾದ್, ಕೊಡಚಾದ್ರಿ, ಆಗುಂಬೆ ಸೇರಿದಂತೆ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ 60 ದಿನ ಚಿತ್ರೀಕರಣವನ್ನುನಡೆಸಲಾಗಿದೆ.

www.ಮೀನಾ ಬಜಾರ್ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣವಾದ ಸಿನಿಮಾವಾಗಿದೆ. ಚಿತ್ರದ ಕುರಿತು ನಿರ್ದೇಶಕ ಸುನೀಲ್ ಕುಮಾರ್ ಮಾತನಾಡಿ “ಇದು ಡಬ್ಬಿಂಗ್ ಸಿನಿಮಾವಲ್ಲ. ಒಬ್ಬ ಕಲಾವಿದ ಒಂದು ಡೈಲಾಗನ್ನು ಕನ್ನಡದಲ್ಲಿ ಹೇಳುವ ಜತೆಗೆ ಅದೇ ಡೈಲಾಗನ್ನು ಮತ್ತೆ ತೆಲುಗಿನಲ್ಲಿ ಹೇಳಬೇಕು. ಈ ರೀತಿ ತೆಗೆದುಕೊಂಡ ಶಾಟ್ ಗಳನ್ನು ಎಡಿಟಿಂಗ್ ಸ್ಟುಡಿಯೋದಲ್ಲಿ ಆಯಾ ಭಾಷೆಗಳಿಗೆ ತಕ್ಕಂತೆ ಬೇರ್ಪಡಿಸಿ ಎಡಿಟ್ ಮಾಡಲಾಗುವುದು. ಆಗ ಕನ್ನಡದ್ದೇ ಒಂದು ಸಿನಿಮಾ. ತೆಲುಗಿನದ್ದೇ ಇನ್ನೊಂದು ಸಿನಿಮಾ ಎಡಿಟಿಂಗ್ ಸ್ಟುಡಿಯೋದಿಂದ ಹೊರಬರುತ್ತದೆ. ನಂತರ ಕನ್ನಡದ ಚಿತ್ರಕ್ಕೆ ಬೆಂಗಳೂರಿನಲ್ಲಿ ಡಬ್ಬಿಂಗ್ ನಡೆದರೆ, ಹೈದರಾಬಾದ್ ನಲ್ಲಿ ತೆಲುಗು ವರ್ಷನ್ ಡಬ್ಬಿಂಗ್ ನಡೆಯುತ್ತದೆ. ಸೌಂಡ್ ಎಫೆಕ್ಟ್ ಮಾಡುವವರು ಸಹ ಕನ್ನಡಕ್ಕೆ ಒಂದು ಬಾರಿ ತೆಲುಗಿಗೆ ಇನ್ನೊಂದು ಬಾರಿ ಮಾಡಬೇಕು. ಇದೇ ರೀತಿ ಆರ್ ಆರ್, ಡಿ.ಟಿ.ಎಸ್, ಡಿ.ಐ ಎಲ್ಲ ವಿಭಾಗಗಳಿಗೂ ಅನ್ವಯವಾಗುತ್ತದೆ. ಎಲ್ಲವನ್ನೂ ಮುಗಿಸಿಕೊಂಡಿರುವ www.ಮೀನಾ ಬಜಾರ್ ಚಿತ್ರದ ತೆಲುಗು ಆವೃತ್ತಿಯ ಕಾಪಿ ತಯಾರಿದ್ದು, ಕನ್ನಡದ ಮೊದಲ ಕಾಪಿ ಒಂದು ವಾರದಲ್ಲಿ ಮುಗಿಯುವ ನಿರೀಕ್ಷೆಯಲ್ಲಿದೆ” ಎಂದಿದ್ದಾರೆ.

 

www.ಮೀನಾ ಬಜಾರ್ ಎರಡು ವರ್ಷನ್ ಗಳನ್ನೂ ರಾಣಾ ಸುನೀಲ್ ಕುಮಾರ್ ಅವರೇ ರಚಿಸಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನಾಗೇಂದ್ರ ಸಿಂಗ್ ಸಿ.ಎನ್. ಬಂಡವಾಳ ಹೂಡಿದ್ದಾರೆ. ಉಳಿದಂತೆ ಮ್ಯಾಥ್ಯೂ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ ಚಿತ್ರಕ್ಕಿದೆ. ತಾರಾಂಗಣಲದಲ್ಲಿ ರಾಣಾ ಸುನೀಲ್ ಕುಮಾರ್ ಸಿಂಗ್, ರಾಜೇಶ್ ನಟರಂಗ, ವೈಭವಿ ಜೋಶಿ, ಶ್ರೀಜಿತ ಘೋಷ್, ಮಧುಸೂದನ್ ಇದ್ದಾರೆ.

ಇನ್ನಷ್ಟು ಓದಿರಿ

Scroll to Top