ತೆಲುಗಿನ ಊಪಿರಿ ರಿಮೇಕ್ ನಲ್ಲಿ ಶಾರುಖ್ ಖಾನ್!

Picture of Cinibuzz

Cinibuzz

Bureau Report

ಸಾಲು ಸಾಲು ಸಿನಿಮಾಗಳ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಕಿಂಗ್ ಖಾನ್ ನಟನೆಯಿಂದ ಕೊಂಚ ಬ್ರೇಕ್ ಪಡೆಯುವ ನಿರ್ಧಾರವನ್ನು ಇತ್ತೀಚಿಗೆ ಹೇಳಿಕೊಂಡಿದ್ದರು. ಇದೀಗ ತೆಲುಗು ರಿಮೇಕ್ ಸಿನಿಮಾಗಳ ಮೂಲಕ ಮತ್ತೆ ಹಳೆ ಫಾರ್ಮಿಗೆ ಮರಳಲು ಶಾರುಖ್ ಖಾನ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಹೌದು ಇತ್ತೀಚಿಗೆ ತೆಲುಗಿನ ಹಿಟ್ ಸಿನಿಮಾಗಳ ಮೇಲೆ ಬಾಲಿವುಡ್ ಕಣ್ಣು ಬಿದ್ದಿದ್ದು ಈಗಾಗಲೇ ತೆಲುಗಿನ ಸಿನಿಮಾಗಳನ್ನು ಬಾಲಿವುಡ್ ನಲ್ಲಿ ರಿಮೇಕ್ ಮಾಡುವ ಕಾರ್ಯ ಶುರುವಾಗಿದೆ.

ಇತ್ತೀಚಿಗಷ್ಟೇ ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾವನ್ನು ಶಾಹೀದ್ ಕಪೂರ್ ಅಭಿನಯದ ಕಬೀರ್ ಸಿಂಗ್ ಸಿನಿಮಾವಾಗಿ ರಿಮೇಕ್ ಮಾಡಲಾಗಿತ್ತು. ಈಗ ಶಾರುಖ್ ಸರದಿಯಾಗಿದ್ದು,  ಮೂಲಗಳ ಪ್ರಕಾರ ಮೂಲಗಳ ಪ್ರಕಾರ ನಾಗಾರ್ಜುನ, ಕಾರ್ತಿ, ತಮನ್ನಾ ತಾರಾಗಣದ ತೆಲುಗು ಬ್ಲಾಕ್‌ಬಸ್ಟರ್‌ ‘ಊಪಿರಿ’ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಶಾರುಕ್‌ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ಏನೆಂದು ತಿಳಿದುಬಂದಿಲ್ಲ. ಈ ಹಿಂದೆ ನಾನಿ ನಟನೆಯ ಜೆರ್ಸಿ ರಿಮೇಕ್ ನಲ್ಲಿ ಶಾರುಖ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

ಇನ್ನಷ್ಟು ಓದಿರಿ

Scroll to Top