ಜುಲೈ 5ಕ್ಕೆ `ಸ್ಪೈಡರ್ ಮ್ಯಾನ್ ಫಾರ್ ಫ್ರಂ ಹೋಮ್’ ಬಿಡುಗಡೆ!

Picture of Cinibuzz

Cinibuzz

Bureau Report

ಸ್ಪೈಡರ್ ಮ್ಯಾನ್ ಸರಣಿಯ ಸ್ಪೈಡರ್ ಮ್ಯಾನ್ ಫಾರ್ ಫ್ರಂ ಹೋಮ್ ಜುಲೈ 5ರಂದು ಪ್ರಪಂಚದಾದ್ಯಂತ ತೆರೆ ಕಾಣಲಿದೆ. ಚಿತ್ರದ ಟ್ರೇಲರ್ ಇತ್ತೀಚಿಗಷ್ಟೇ ರಿಲೀಸ್ ಆಗಿದ್ದು, ಈಗಾಗಲೇ ಆರು ಕೋಟಿಗೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಈ ಚಿತ್ರದಲ್ಲಿಯೂ ಸ್ಪೈಡರ್‌ಮ್ಯಾನ್‌ ಈ ಹಿಂದಿನ ಸರಣಿ ಚಿತ್ರಗಳಂತೆ ಹೊಸ ಸಾಹಸಗಳ ಮೂಲಕ ವೀಕ್ಷಕರನ್ನು ಮನರಂಜಿಸಲಿದ್ದಾನೆ. ಇನ್ನು ಸ್ಪೈಡರ್ ಮ್ಯಾನ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಅವನು ಧರಿಸುವ ಮಾಸ್ಕ್ ನಲ್ಲಿ ಕಂದು ಬಣ್ಣ ಪ್ರಧಾನವಾಗಿರುತ್ತದೆ.

ಸ್ಟೆಲ್ತ್‌ ಸೂಟ್‌ ಎನ್ನಲಾಗುವ ಹೊಸ ಉಡುಗೆಯಲ್ಲಿ ಪೀಟರ್‌ ಪಾರ್ಕರ್‌ಗೆ ಹೊಸ ಕನ್ನಡಕವೂ ಅವನ ಆಕರ್ಷಣೆಯನ್ನು ಹೆಚ್ಚಿಸಲಿದೆ. ಎದೆಭಾಗಕ್ಕೆ ಕವಚದಂತಹ ಕಪ್ಪು ವಿನ್ಯಾಸವೂ ಗಮನ ಸೆಳೆಯುವಂತಿದೆ. ಈ ಚಿತ್ರದ ಕೆಲ ದೃಶ್ಯಗಳು ಈಗಾಗಲೇ ಲೀಕ್‌ ಆಗಿದ್ದು, ಕಳೆದ ವಾರ ಈ ಕುರಿತು ಬೇಸರವನ್ನು ವ್ಯಕ್ತಪಡಿಸಿತ್ತು. ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸ್ಪೈಡರ್ ಮ್ಯಾನ್ ಫಾರ್ ಫ್ರಂ ಹೋಮ್ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಜಾನ್ ವಾಟ್ಸ್ ನಿರ್ದೇಶನ ಮಾಡಿದ್ದು, ತಾರಾಂಗಣದಲ್ಲಿ ಟಾಮ್ ಹಾಲೆಂಡ್, ಝೆಂಡಯಾ, ಜೇಕ್‌ ಗಿಲ್ಲೆನ್‌ಹಾಲ್‌, ಮೈಕಲ್‌ ಕೀಟನ್‌ ಮೊದಲಾದವರು ಇದ್ದಾರೆ. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ ಬ್ಯಾನರ್ ನಲ್ಲಿ ಸ್ಪೈಡರ್ ಮ್ಯಾನ್ ಫಾರ್ ಫ್ರಂ ಹೋಮ್ ಮೂಡಿಬರುತ್ತಿದೆ.

ಇನ್ನಷ್ಟು ಓದಿರಿ

Scroll to Top