ದೇವರು ಬೇಕಾಗಿದ್ದಾರೆ ಫೋಸ್ಟರ್ ಬಿಡುಗಡೆ!

Picture of Cinibuzz

Cinibuzz

Bureau Report

ಕೆಂಜಾ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ದೇವರು ಬೇಕಾಗಿದ್ದಾರೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಟೈಟಲ್ಲಿಗೆ ತಕ್ಕಂತೆ ಫೋಸ್ಟರಿನಲ್ಲಿ ಬಾಲಕನೊಬ್ಬ ಬೆನ್ನು ತೋರಿಸಿಕೊಂಡು ಆಕಾಶಕ್ಕೆ ಬ್ಯಾಟರಿ ಬಿಡುವ ಮೂಲಕ ಯಾರನ್ನೋ ಹುಡುಕುತ್ತಿರುವಂತೆ ಬಿಂಬಿಸಲಾಗಿದೆ. ದೇವರು ಬೇಕಾಗಿದ್ದಾರೆ ಸಿನಿಮಾದಲ್ಲಿ ಹಿರಿಯ ನಟ ಶಿವರಾಂ, ಮಾಸ್ಟರ್ ಅನೂಪ್, ಸತ್ಯನಾಥ್, ಪ್ರಸಾದ್, ನಾಗೇಶ್ ಕಾರ್ತಿಕ್ ಮುಂತಾದವರು ನಟಿಸಿದ್ದಾರೆ.

ಕೆಂಜಾ ಚೇತನ್ ನಿರ್ದೇಶನ ಮಾಡುತ್ತಿರುವ ದ್ವಿತೀಯ ಸಿನಿಮಾ ಇದಾಗಿದ್ದು, ಈ ಮೊದಲು ಪ್ರೇಮ ಗೀಮಾ ಜಾನೆದೋ ಎಂಬ ಪ್ರೇಮಕಥೆಯನ್ನು ನಿರ್ದೇಶಿಸಿದ್ದರು. ಇದೀಗ ನಿರ್ದೇಶಕರು ಅಧ್ಯಾತ್ಮಕ ಒಲವಿಗೆ ಬಿದ್ದಂತೆ ಕಾಣುತ್ತಿದ್ದಾರೆ. ಹಾರಿಜೋನ್ ಮೂವೀಸ್ ಅಡಿಯಲ್ಲಿ  ದೇವರು ಬೇಕಾಗಿದ್ದಾರೆ ಮೂಡಿಬಂದಿದ್ದು, ನಿರ್ದೇಶಕರು ಸೇರಿದಂತೆ ಅನೇಕ ಸ್ನೇಹಿತರು ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top