ಡಾ. ರಾಜ್ ಕುಮಾರ್ ಮತ್ತು ಲೀಲಾವತಿ ಕಾಂಬಿನೇಷನ್ನಿನ ಎವರ್ ಗ್ರೀನ್ ಸಿನಿಮಾ ವೀರಕೇಸರಿ. 60ರ ದಶಕದಲ್ಲಿ ಡಾ. ರಾಜ್ ಕುಮಾರ್, ಲೀಲಾವತಿ, ಉದಯ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ ಅವರಿಗೆ ಒಂದು ಮಟ್ಟಿನ ಹೆಸರನ್ನು ತಂದುಕೊಟ್ಟಿದ್ದ ಚಿತ್ರವದು. ಈಗ ಅದೇ ಹೆಸರಿನ ಮತ್ತೊಂದು ಸಿನಿಮಾ ಸೆಟ್ಟೇರಲಿದೆ.

ಹೌದು ರಾಘವೇಂದ್ರ ರಾಜ್ ಕುಮಾರ್ ಹಿರಿ ಮಗ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ವೀರ ಕೇಸರಿ ಎಂದು ಹೆಸರಿಡಲಾಗಿದೆಯಂತೆ. ಈ ಸಿನಿಮಾವನ್ನು ರಘು ವರ್ಧನ್ ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಕಥೆಗೆ ಮತ್ತು ಟೈಟಲ್ಲಿಗೆ ಹೊಂದಿಕೆಯಾಗುವ ಕಾರಣದಿಂದ ಅದೇ ಟೈಟಲನ್ನು ಬಳಿಸಿಕೊಂಡಿದ್ದು, ಹಳೆ ಚಿತ್ರಕ್ಕೂ ಹೊಸ ಚಿತ್ರಕ್ಕೂ ಲಿಂಕ್ ಇಲ್ಲವೆಂದೂ ರಘು ವರ್ಧನ್ ಸ್ಪಷ್ಟಪಡಿಸಿದ್ದಾರೆ.











































