ತಿಥಿ ಗಡ್ಡಪ್ಪನ `ಜರ್ಕ್’ ಟ್ರೇಲರ್ ಬಿಡುಗಡೆ!

Picture of Cinibuzz

Cinibuzz

Bureau Report

ತಿಥಿ ಗಡ್ಡಪ್ಪ ಅಭಿನಯಿಸಿರುವ ಜರ್ಕ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈಗಾಗಲೇ ಬರಪೂರ ಪ್ರತಿಕ್ರಿಯೆಯನ್ನು ಗಳಿಸುತ್ತಿರುವ ಜರ್ಕ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ಕೃಷ್ಣರಾಜ್ ಚೊಚ್ಚಲ ಬಾರಿಗೆ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದು, ಮಹಾಂತೇಶ್ ಮದಕರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಲು ಬಯಸಿ, ಚಿತ್ರದುರ್ಗದಿಂದ ಬೆಂಗಳೂರಿಗೆ ಬರುವ ವ್ಯಕ್ತಿ ತನ್ನ ಮಾಲೀಕರ ಮಗನ ಸಹಾಯದಿಂದ ಮತ್ತೆಲ್ಲಿಗೋ ಜರ್ನಿ ಪ್ರಾರಂಭಿಸುತ್ತಾನೆ. ಅಲ್ಲೊಂದು ಸಂಕಷ್ಟದಲ್ಲಿ ಸಿಲುಕಿದ ನಾಯಕ ಹೇಗೆ ಹೊರಬರುತ್ತಾನೆ ಎಂಬುದು ಜರ್ಕ್ ನ ಕಥಾಹಂದರವಾಗಿದೆ. ತಿಥಿ ಗಡ್ಡಪ್ಪ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದು, ಸ್ವಾಮೀಜಿಯಾಗಿ ಮತ್ತು ಸೂಟ್ ಧಾರಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಥ್ರಿಲ್ಲರ್ ಮಂಜು, ಮಜಾಟಾಕೀಸ್ ಪವನ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಪದ್ಮಶ್ರೀ, ಆಶಾ ಭಂಡಾರಿ, ಮತ್ತಿತ್ತರರು ನಟಿಸಿದ್ದಾರೆ. ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣ, ಎಡ್ವರ್ಡ್ ಷಾ ಸಂಗೀತ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top